ಮಕ್ಕಾ ಮಸೀದಿ ಅವಹೇಳನ ಪ್ರಕರಣದಲ್ಲಿ ಅಮಾಯಕ ಯುವಕರ ಫಿಕ್ಸ್ ಆರೋಪ ► ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ಬಂದ್ ಗೆ ಕರೆ

(ನ್ಯೂಸ್ ಕಡಬ) newskadaba.com ಕಡಬ, ಅ.26. ವಾಟ್ಸಾಪ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೋಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 28 ಶನಿವಾರದಂದು ಕಡಬ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆನೀಡಿವೆ.

ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುತರ್ು ಸಭೆ ನಡೆಸಿ ಈ ನಿಧರ್ಾರಕ್ಕೆ ಬಂದಿದ್ದಾರೆ. ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಮಸೀದಿಯ ಅವಹೇಳನ ಪ್ರಕರಣದ ಬಗ್ಗೆ ನಮಗೂ ವಿಷಾದವಿದೆ. ಆದರೆ ಹಿಂದೂ ಶಕ್ತಿಯ ಮೇಲೆ ನಿರಂತರ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ. ವಾಟ್ಸಾಪ್ ಪ್ರಕರಣದಲ್ಲಿ ಆರೋಪಿತ ಯುವಕನನ್ನು ಸಂಘಟನೆಯ ಪ್ರಮುಖರೇ ಪೋಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕನನ್ನು ಸಿಲುಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲೀಸರಿಗೆ ನಾವು ಇಷ್ಟೊಂದು ಸಹಕಾರ ನೀಡುತ್ತಿರುವಾಗ ಪ್ರಕರಣಕ್ಕೆ ಸಂಬಂಧಪಡದ ಯುವಕನೊಬ್ಬನನ್ನು ಪ್ರಕರಣದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಪೋಲೀಸರು ಹಿಂದೂಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಅನಗತ್ಯವಾಗಿ ನಾಲ್ವರನ್ನು ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗ ಅದಕ್ಕೆ ಸಹಕಾರ ಮಾಡಿದ ಯಾವೊಬ್ಬ ಆರೋಪಿಯನ್ನು ಈವರಗೆ ಬಂಧಿಸಿಲ್ಲ, ಮಾತ್ರವಲ್ಲ ಇತ್ತೀಚೆಗೆ ದೇಯಿಬೈದೆತಿ ಪ್ರತಿಮೆಗೆ ಅವಮಾನ ಮಡಿದ ಆರೋಪಿಗೆ ಸಹಕರಿಸಿದ ವ್ಯಕ್ತಿಯನ್ನು ಈವರೆಗೆ ಬಂಧಿಸಿಲ್ಲ. ಆದರೆ ಕಡಬದ ಪ್ರಕರಣದಲ್ಲಿ ಪೋಲೀಸರು ಇನ್ನಿಲ್ಲದ ಪ್ರಯತ್ನ ಮಾಡಿ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದ ಕೃಷ್ಣ ಶೆಟ್ಟಿ ಸುಬ್ರಹ್ಮಣ್ಯದ ಹಿಂದೂ ಕಾರ್ಯಕರ್ತನೊಬ್ಬನನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ. ಶನಿವಾರ ಕಡಬ ಹಾಗೂ ಸುಬ್ರಹ್ಮಣ್ಯದಲ್ಲಿ ಏಕ ಕಾಲದಲ್ಲಿ ಬಂದ್ ಹಾಗೂ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

Also Read  ಕ್ರಮಬದ್ಧ ಜೀವನಶೈಲಿ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ - ಪ್ರಾಂಶುಪಾಲ ದಾಮೋದರ ಕಣಜಾಲು..!

ಸಭೆಯಲ್ಲಿ ಪ್ರಮುಖರಾದ ಪ್ರಕಾಶ್ ಎನ್.ಕೆ, ಸುಂದರ ಗೌಡ ಮಂಡೆಕರ, ರಮೇಶ್ ಕಲ್ಪುರೆ, ಸಂತೋಷ್ ಕುಮಾರ್ ಕೋಡಿಬೈಲ್, ವಾಸುದೇವ ಗೌಡ ಕೊಲ್ಲೆಸಾಗು, ಗಿರೀಶ್ ಎ.ಪಿ. ದಾಮೋಧರ ಗೌಡ ಡೆಪ್ಪುಣಿ, ಮೇದಪ್ಪ ಗೌಡ ಡೆಪ್ಪುಣಿ, ರಾಮಚಂದ್ರ ಟೈಲರ್, ಯತೀಶ್ ಹೊಸಮನೆ, ಅಶೋಕ್ ಕುಮಾರ್ ಪಿ, ವೇಣುಗೋಪಾಲ ರೈ, ವಿಘ್ನೇಶ್ ಕೊಠಾರಿ, ದಯಾನಂದ ಉಂಡಿಲ, ಆನಂದ ಪೂಜಾರಿ, ಜಿನ್ನಪ್ಪ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top