ಆಟವಾಡುತ್ತಿದ್ದ ವೇಳೆ ಇಲಿ ಪಾಷಾಣ ಸೇವನೆ ➤ ಎರಡೂವರೆ ವರ್ಷದ ಕಂದಮ್ಮ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.20. ಇಲಿ ಪಾಷಾಣ ಸೇವಿಸಿ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ.

ಮೃತ ಮಗುವನ್ನು ಕೆಮ್ಮಾರ ನಿವಾಸಿ ನಿವೃತ್ತ ಸೈನಿಕ ಸೈಜು ಎಂಬವರ ಎರಡೂವರೆ ವರ್ಷದ ಪುತ್ರಿ ಶ್ರೇಯಾ ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಮನೆಯ ನಾಯಿ ಗೂಡಿನ ಮೇಲೆ ತಂದಿಟ್ಟಿದ್ದ ಇಲಿ ಪಾಷಾಣದ ಟ್ಯೂಬನ್ನು ಶನಿವಾರದಂದು ಮಗು ಆಕಸ್ಮಿಕವಾಗಿ ಸೇವಿಸಿತ್ತು. ಮಧ್ಯಾಹ್ನದ ವೇಳೆ ಮಗುವಿಗೆ ವಾಂತಿ ಆರಂಭಗೊಂಡ ಹಿನ್ನೆಲೆಯಲ್ಲಿ ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಭಾನುವಾರದಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.

 

 

 

Scroll to Top