ಸವಣೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪಾರ್ಸೆಲ್ ಸಾಗಾಟದ ಓಮ್ನಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) Newskadaba.com ಪುತ್ತೂರು, ಜೂ. 15. ವಿದ್ಯುತ್ ಕಂಬಕ್ಕೆ ಓಮ್ನಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಇಬ್ಬರಿಗೆ ಗಾಯವಾದ ಘಟನೆ ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸವಣೂರು ಎಂಬಲ್ಲಿ ನಡೆದಿದೆ.

ಅಮೆಜಾನ್ ನ ಪಾರ್ಸೆಲ್ ಸಾಗಟದ ಓಮ್ನಿ ಕಾರೊಂದು ಸುಬ್ರಹ್ಮಣ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಓಮ್ಮಿ ಸ್ಕಿಡ್ ಆಗಿ ವಿರುದ್ಧ ದಿಕ್ಕಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಪರಿಣಾಮ ಒಮ್ನಿಯಲ್ಲಿದ್ದ ಇಬ್ಬರಿಗೆ ತಲೆ ಹಾಗೂ ಕಿವಿಗೆ ಗಾಯವಾಗಿದೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  'ನನ್ನ ಕೆಲಸ ನಿಮಗೆ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ದರೆ ಹಾಕಬೇಡಿ' ➤ ನಿತಿನ್ ಗಡ್ಕರಿ

error: Content is protected !!
Scroll to Top