ವಿದ್ಯಾರ್ಥಿ ನಾಯಕರನ್ನು ಅನ್ಯಾಯವಾಗಿ ಜೈಲಿನಲ್ಲಿ ಕೂಡಿಟ್ಟ ಹಿನ್ನೆಲೆ ➤ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾದ್ಯಂತ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ‍ಬಳ್ಳಾರಿ, ಜೂ. 15. ಉತ್ತರಪ್ರದೇಶದಲ್ಲಿ ನಡೆದ ಮನಿಷಾ ಎಂಬ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು, ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ನಾಯಕರಾದ ಆತಿಕುರ್ರಹ್ಮಾನ್, ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್, ಆಲಂ ಅದೇ ರೀತಿ ಇದೇ ಪ್ರಕರಣವನ್ನು ನೆಪವಾಗಿರಿಸಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನ್ನು ಕೂಡಾ ಅನ್ಯಾಯವಾಗಿ ಬಂಧಿಸಿ ಇಂದಿಗೆ 250 ದಿನಗಳಾಗಿದ್ದು, ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ ಹಾಗೂ ಇತರೆ ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು. ಮೋದಿಯ ಸರ್ವಾಧಿಕಾರದ ದೇಶದಲ್ಲಿ ಇವರ ವಿರುದ್ದ ಯಾರೆಲ್ಲಾ ಧ್ವನಿಯೆತ್ತುತ್ತಾರೋ ಅವರನ್ನು ಇಂದು ಭೇಟೆಯಾಡುತ್ತಿದ್ದಾರೆ. ಅತ್ಯಾಚಾರಕ್ಕೊಳಪಟ್ಟು ಕೊಲೆಗೈಯಲ್ಪಟ್ಟ ಬಾಲಕಿಯ ಮನೆಗೆ ಭೇಟಿ ನೀಡುವುದು ಕೂಡ ಈ ದೇಶದಲ್ಲಿ ದೇಶದ್ರೋಹವಾಗುತ್ತಿದೆ. ಈ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಯೊಂದು ಜಾತ್ಯಾತೀತ ಮೌಲ್ಯದ ಮೇಲೆ ನಂಬಿಕೆಯಿರಿಸಿದ ವ್ಯಕ್ತಿಯು ಖಂಡಿಸಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಸುಹೈಲ್ ಹೇಳಿದರು. ಈ ಅಕ್ರಮ ಬಂಧನದಿಂದ ವಿದ್ಯಾರ್ಥಿ ನಾಯಕರನ್ನು, ಪತ್ರಕರ್ತರನ್ನು ಬಿಡುಗಡೆಗೊಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಶು, ಜಿಲ್ಲಾ ಕಾರ್ಯದರ್ಶಿ ಫೈಜ್, ಜಂಟಿ ಕಾರ್ಯದರ್ಶಿ ಹಬೀಬ್ ಹಾಗೂ ನಜಾರ್ ಜಿಲ್ಲಾ ಖಜಾಂಚಿ ಯುಸೂಫ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಷಾನವಾಜ್, ಜಮೀರ್, ಫಯಾಜ್ ಮತ್ತಿತರು ಉಪಸ್ಥಿತರಿದ್ದರು.

Scroll to Top