ಇದು ಜೀವರಕ್ಷಕವೋ…? ಯಮದೂತವೋ…? ► ಅನಾಹುತವನ್ನು ಆಹ್ವಾನಿಸುತ್ತಿರುವ ಕಡಬದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಅ.25. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಜನರ ಜೀವರಕ್ಷಣೆಗೆಂದು ಸರಕಾರದಿಂದ ನಿಯೋಜಿತವಾಗಿರುವ 108 ಆಂಬ್ಯುಲೆನ್ಸ್ ವಾಹನವು ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಯಮದೂತವಾಗಿ ಪರಿಣಮಿಸುತ್ತಿದೆಯಾ…??

 

ಹೌದು… ಹೀಗೊಂದು ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ವಾಹನದಲ್ಲಿ ಅಗತ್ಯವಾಗಿ ಇರಬೇಕಾಗಿದ್ದ ಚಕ್ರಗಳೇ ಸರಿಯಿಲ್ಲದಿದ್ದರೆ ಹೇಗೆ….? ಕಡಬ ಪರಿಸರದಲ್ಲಿ ತುರ್ತು ಸಂದರ್ಭಕ್ಕೆಂದು ಕೊಡಮಾಡಿರುವ 108 ಆಂಬ್ಯುಲೆನ್ಸ್ ವಾಹನದ ಹಿಂಭಾಗದ ಎರಡೂ ಚಕ್ರಗಳು ಸವೆದಿದ್ದು ಈಗಲೋ ಆಗಲೋ ಒಡೆಯುವ ಸ್ಥಿತಿಯಲ್ಲಿದೆ. ಚಕ್ರಗಳು ಪೂರ್ತಿ ಸವೆದು ಒಳಗಿನ ತಂತಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇಷ್ಟು ಸವೆದರೂ ಅಧಿಕಾರಿ ವರ್ಗದವರು ಯಾಕಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಾರೆ ಎಂಬುವುದು ದೇವರೇ ಬಲ್ಲ. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಟಯರ್ ಒಡೆದು ಏನಾದರೂ ಅನಾಹುತಗಳು ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

Also Read  ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

 

error: Content is protected !!
Scroll to Top