ಪಂಜ: ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಜೂ. 04. ಪಂಜ ವಲಯ ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ರವರು ಜೂ.1 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

 

ಬಿ.ಎಸ್ಸಿ ಫಾರೆಸ್ಟ್ರಿ ವಿದ್ಯಾಭ್ಯಾಸವನ್ನು ಶಿರಸಿಯಲ್ಲಿ ಪೂರೈಸಿದ ಇವರು ಉತ್ತರಾಖಾಂಡ್ ನಲ್ಲಿ ತರಬೇತಿ ಪಡೆದಿದ್ದಾರೆ. ಬಳಿಕ 6 ತಿಂಗಳ ಕಾಲ ಬೇರೆ ಬೇರೆ ವಲಯದಲ್ಲಿ ಕ್ಷೇತ್ರ ಮಟ್ಟದ ತರಬೇತಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ತಿಂಗಳ ಕಾಲ ಪಂಜ ವಲಯದ ವಲಯ ಅರಣ್ಯಾಧಿಕಾರಿಯವರೊಂದಿ 6 ತಿಂಗಳು ಕ್ಷೇತ್ರ ಮಟ್ಟದ ತರಬೇತಿ ಪಡೆದ ಬಳಿಕ ಸರಕಾರ ಸೂಚಿಸಿದ ವಲಯದಲ್ಲಿ ಸ್ವತಂತ್ರ ಪ್ರಭಾರದ ಮೇಲೆ ಕಾರ್ಯನಿರ್ವಹಿಸಲಿದ್ದಾರೆ. ಇವರು ಬಳ್ಪ ಗ್ರಾಮದ ಎಣ್ಣೆಮಜಲು ಸುಂದರ ಗೌಡ ಮತ್ತು ಶಾರದ ದಂಪತಿಗಳ ಪುತ್ರ.

Also Read  ನೀವು ಉದ್ಯೋಗ ಇಲ್ಲದೆ ಪರದಾಡುತ್ತಿದ್ದೀರಾ..?    ➤ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top