ಕಡಬ: ಅಪರಿಚಿತ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿದ ಸೇವಾ ಭಾರತಿ ➤ ಕಡಬ ಪೊಲೀಸರ ಸಾಥ್

(ನ್ಯೂಸ್ ಕಡಬ) newskadaba.com ಕಡಬ, ಜೂ.04. ತಾಲೂಕಿನ ಮರ್ದಾಳ, ಕೋಡಿಂಬಾಳ ಹಾಗೂ ಕಡಬ ಪೇಟೆಯಲ್ಲಿ ಕಳೆದ ಮೂರು ದಿನಗಳಿಂದ ಅಲೆದಾಡುತ್ತಿದ್ದ ಅಪರಿಚಿತ ಮಹಿಳೆಯನ್ನು ಸೇವಾಭಾರತಿಯ ವತಿಯಿಂದ ಆಶ್ರಮಕ್ಕೆ ಕರೆದೊಯ್ಯಲಾಯಿತು.

ಸುಮಾರು 35 ರಿಂದ 40 ವರ್ಷ ಪ್ರಾಯದ ಹಿಂದಿ ಭಾಷೆ ಮಾತನಾಡುವ ಮಹಿಳೆಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಿದ ನಂತರ ಸೇವಾಭಾರತಿಯ ಅಂಬ್ಯುಲೆನ್ಸ್ ನಲ್ಲಿ ಕೇರಳದ ದೈಗೋಳಿ ಎಂಬಲ್ಲಿನ ಸಾಯಿ ನಿಕೇತನ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ರುಕ್ಮನಾಯ್ಕ್ ಹಾಗೂ ಸಿಬ್ಬಂದಿಗಳು, ಸೇವಾಭಾರತಿಯ ಸದಸ್ಯರಾದ ಜಿನಿತ್ ಮರ್ದಾಳ, ರಘುರಾಮ ಕೋಡಿಂಬಾಳ ಮತ್ತು ಮಹೇಶ್ ಬಲ್ಯರವರು ಉಪಸ್ಥಿತರಿದ್ದರು.

Also Read  ವಶೀಕರಣ ತಂತ್ರ ಮತ್ತು ದಿನ ಭವಿಷ್ಯ

 

 

 

error: Content is protected !!
Scroll to Top