ಬೆಳ್ಳಾರೆ: ಖ್ಯಾತ ಯೋಗಪಟು ಆದಿತ್ಯ ಬೆಳ್ಳಾರೆ ಕೊರೋನಾಗೆ ಬಲಿ

(ನ್ಯೂಸ್ ಕಡಬ) Newskadaba.com ಬೆಳ್ಳಾರೆ, ಮೇ. 26. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ, ಹೆಸರಾಂತ ಯೋಗಪಟು ಆದಿತ್ಯ ಬೆಳ್ಳಾರೆ(52) ರವರು ಕೆಲ ಸಮಯದ ಅಸೌಖ್ಯದಿಂದ ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

 


ಕೆಲದಿನಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Also Read  ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ

error: Content is protected !!
Scroll to Top