ಚಾರ್ಮಾಡಿ ಹೊಳೆಯಲ್ಲಿ ಏಕಾಏಕಿ ಉಕ್ಕಿಹರಿದ ನೆರೆ ➤ ಮುಳುಗಿದ ಪಿಕಪ್ ವಾಹನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ. 25. ಇಲ್ಲಿನ ಚಾರ್ಮಾಡಿ ಬಳಿಯ ಮೃತ್ಯುಂಜಯ ನದಿಯಲ್ಲಿ ಒಮ್ಮಿಂದೊಮ್ಮೆಲೇ ನೆರೆನೀರು ಉಕ್ಕಿ ಹರಿದ ಪರಿಣಾಮ ಪಿಕಪ್ ವಾಹನವೊಂದು ನೀರಿನಲ್ಲಿ ಮುಳುಗಿದ ಘಟನೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ.


ಪಿಕಪ್ ವಾಹನವು ಹೊಳೆಯನ್ನು ದಾಟುತ್ತಿದ್ದ ವೇಳೆ ನೆರೆನೀರು ಉಕ್ಕಿ ಬಂದಿದ್ದು, ತಕ್ಷಣವೇ ಅದರಲ್ಲಿದ್ದ ಚಾಲಕ ಸದಾನಂದ ಎಂಬವರನ್ನು ಸ್ಥಳೀಯರು ಸೇರಿ ರಕ್ಷಿಸಲಾಗಿದೆ. ಬಳಿಕ ಪಿಕಪ್ ವಾಹನಕ್ಕೆ ಹಗ್ಗ ಕಟ್ಟಿ ನಿಧಾನಕ್ಕೆ ಎಳೆದು ನದಿಯಿಂದ ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ. ಕಳೆದ ಬಾರಿಯೂ ಈ ನದಿಯಲ್ಲಿ ಆಗಾಗ ನೆರೆ ಬರುತ್ತಿದ್ದು, ಘಟ್ಟ ಪ್ರದೇಶದಲ್ಲಿ ಮಳೆಯಾದ ಸಂದರ್ಭ ಅಲ್ಲಿಂದ ನೀರು ಹರಿದುಬಂದು ಬತ್ತಿಹೋದ ನದಿಯಲ್ಲಿ ಒಮ್ಮಿಂದೊಮ್ಮೆಲೇ ನೆರೆ ಬರುತ್ತಿದ್ದ ಘಟನೆ ಆಗುತ್ತಿತ್ತು. ಈ ಬಾರಿಯೂ ಅಂತಹುದೇ ಘಟನೆ ಆರಂಭದಲ್ಲೇ ನಡೆಯುತ್ತಿದ್ದು ಸ್ಥಳೀಯರನ್ನು ಭೀತಿಗೊಳಿಸಿದೆ.

Also Read  ಕಾಣೆಯಾಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ...!

error: Content is protected !!
Scroll to Top