ಶೀಘ್ರದಲ್ಲಿ ಬರಲಿದೆ ವಾಟ್ಸಪ್‌ ಗುಂಪಿನ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ..!!!

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಅ.25. ವಾಟ್ಸಪ್‌ ಬಳಕೆದಾರರು ಇನ್ನು ಮುಂದೆ ವೀಡಿಯೋ ಕಾಲ್ ಮಾತ್ರವಲ್ಲದೇ, ಗುಂಪಿನ ಸದಸ್ಯರ ಜೊತೆ ಕಾನ್ಫರೆನ್ಸ್ ಕರೆಗಳ ಮೂಲಕ ಕೂಡ ಮಾತನಾಡಬಹುದಾಗಿದೆ.

ವಾಟ್ಸಪ್ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಹೋದ್ಯೋಗಿಗಳೊಂದಿಗೆ ಧ್ವನಿ ಮತ್ತು ವಿಡಿಯೋ ಕಾನ್ಫರೆನ್ಸ್ ಕರೆಗಳನ್ನು ಮಾಡುವ ಅವಕಾಶ ಶೀಘ್ರದಲ್ಲೇ ಲಭ್ಯವಾಗಲಿದೆ.

ಮುಂದಿನ ಅಪ್‌ಡೇಟ್‌ನಲ್ಲಿ ವಾಟ್ಸಪ್ ಗಂಪು ಕರೆ ಮಾಡುವ ಸೌಲಭ್ಯವನ್ನು ನೀಡಲಿದೆ. 2.17.70 ಅಪ್‌ಡೇಟ್ ಮೂಲಕ ಈ ಸೌಲಭ್ಯ ಲಭ್ಯವಾಗಲಿದೆ.

Also Read  ದಂಪತಿಗಳ ನಡುವೆ ಸಂಬಂಧ ಉತ್ತಮವಾಗಿರಬೇಕು ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವವರು ಈ ವಿಧಾನ ಅನುಸರಿಸಿ ಕಷ್ಟಗಳು ಪರಿಹಾರವಾಗುತ್ತದೆ

ಅಲ್ಲದೇ ಸಂದೇಶಗಳನ್ನು ಅನ್‌ಸೆಂಡ್ ಮತ್ತು ಡಿಲೀಟ್ ಮಾಡುವ ಆಯ್ಕೆಯನ್ನೂ ಪರೀಕ್ಷಿಸಿದೆ ಎಂದು ವರದಿಗಳು ತಿಳಿಸಿವೆ.

error: Content is protected !!
Scroll to Top