ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ದಲಿತ ಯುವಕನೋರ್ವನನ್ನು ಕಾನೂನು ಬಾಹಿರವಾಗಿ ಬಂಧಿಸಿ ಮೂತ್ರ ಕುಡಿಸಿರುವ ಅಮಾನವೀಯ ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಣಿಬೀಡು ಠಾಣಾ ಎಸ್ಐ ಅರ್ಜುನ್ ಹೊರಕೇರಿಯವರನ್ನು ಅಮಾನತು ಮಾಡಲಾಗಿದೆ.

ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಆರೋಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತು ಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿದ್ದು, ಪ್ರಕರಣದ ಕುರಿತು ವಿವರವಾದ ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಗಾನಕುಮಾರಿಯವರಿಗೆ ಸೂಚಿಸಿದ್ದಾರೆ. ಅಲ್ಲದೇ ಪ್ರಕರಣದ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಮುಂದಿನ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

Also Read  LMV ಲೈಸೆನ್ಸ್ ಹೊಂದಿರುವವರು 7500 ಕೆಜಿ ತೂಕದ ವಾಹನವನ್ನು ಚಲಾಯಿಸಬಹುದು- ಸುಪ್ರೀಂ ಕೋರ್ಟ್

 

 

error: Content is protected !!
Scroll to Top