ನೆಲ್ಯಾಡಿ: ವ್ಯಾಕ್ಸಿನ್ ಸಾಗಾಟದ ಸುಮೋ – ಲಾರಿ ನಡುವೆ ಢಿಕ್ಕಿ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.17. ವ್ಯಾಕ್ಸಿನ್ ಸಾಗಾಟದ ಟಾಟಾ ಸುಮೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯ ಧರ್ಮಸ್ಥಳ ತಿರುವಿನಲ್ಲಿ ಸೋಮವಾರದಂದು ನಡೆದಿದೆ.







ಸರಕಾರಿ ಟಾಟಾ ಸುಮೋ ವಾಹನದಲ್ಲಿ ಕೊರೋನಾ ವ್ಯಾಕ್ಸಿನ್ ಸಾಗಾಟ ಮಾಡಲಾಗುತ್ತಿದ್ದ ವೇಳೆ ಧರ್ಮಸ್ಥಳ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಟಾಟಾ ಸುಮೋ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

 

error: Content is protected !!
Scroll to Top