ನರಿಮೊಗರು: ಮಳೆಗೆ ಕುಸಿದ ಮನೆಯ ಕಾಂಪೌಂಡ್ ➤ ಮನೆ ಕುಸಿತದ ಭೀತಿಯಲ್ಲಿ ಕುಟುಂಬ

(ನ್ಯೂಸ್ ಕಡಬ) Newskadaba.com ನರಿಮೊಗರು, ಮೇ. 16. ತೌಕ್ತೆ ಚಂಡಮಾರುತದಿಂದಾಗಿ ಕರಾವಳಿಯಾದ್ಯಂತ ಭಾರೀ ಮಳೆ ಸುರಿದಿದ್ದು, ಪರಿಣಾಮ ಮುಂಡೂರು ಗ್ರಾಮದ ಕಾಳಿಂಗಹಿತ್ತಲು ಎಂಬಲ್ಲಿನ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದಲ್ಲದೇ ಮನೆಯ ಜಗಲಿ ಕೂಡಾ ಬಿರುಕು ಬಿಟ್ಟು ಮನೆ ಕುಸಿಯುವ ಬೀತಿಯಲ್ಲಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಮುಖಂಡ ಅರುಣ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್, ಜನಾರ್ದನ ಪೂಜಾರಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಹಾಗು ಸ್ಥಳೀಯರು ಕಲ್ಲು ತೆರವುಗೊಳಿಸಿ, ತಕ್ಷಣಕ್ಕೆ ಮನೆಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿದ್ದಾರೆ. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಅವರು ಬೇಟಿ ನೀಡಿ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಅದೇಶಿಸಿದ್ದಾರೆ.

Also Read  ಸಾಲ ಭಾದೆಗೆ ಸರಳ ಪರಿಹಾರ

 

error: Content is protected !!
Scroll to Top