ಕಡಬದಲ್ಲಿ ಲಾಕ್‍ಡೌನ್ ಎಫೆಕ್ಟ್ ಹೇಗಿತ್ತು ಗೊತ್ತೇ..⁉️ ➤ ಅನಗತ್ಯ ತಿರುಗಾಡುವವರಿಗೆ ಪೊಲೀಸರಿಂದ ಬ್ರೇಕ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕೊರೋನ ತಡೆಗಟ್ಟುವಿಕೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜಾರಿಯಾಗಿರುವ ವಾರಾಂತ್ಯದ ಕರ್ಪ್ಯೂಗೆ ಕಡಬ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೋಮವಾರ ಬೆಳಿಗ್ಗೆಯಿಂದಲೇ ಪೇಟೆಯಲ್ಲಿ ಕಿಕ್ಕಿರಿದ ಜನಸಂದಣಿಯಿಂದ ಕೂಡಿತ್ತು. ಕರ್ಫ್ಯೂಗೆ ಹೆದರಿ ಜನತೆ ಬೆಳಿಗ್ಗೆ ತಮ್ಮ ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿದರು. ಮೆಡಿಕಲ್ ಶಾಪ್‌ಗಳು ಜನಸಂದಣಿಯಿಂದ ಕೂಡಿತ್ತು. ಬೆಳಿಗ್ಗೆಯಿಂದ ಪೇಟೆಯಲ್ಲಿ ಜನರ ಓಡಾಟ ಹೆಚ್ಚಾಗಿದ್ದ ಕಾರಣ ಕಡಬ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ತಲೆದೂರಿತ್ತು. ಕಡಬ ಪೇಟೆಯ ಅಂಗಡಿ ಮುಂಗಟ್ಟುಗಳಲ್ಲಿ ಬೆಳಗ್ಗಿನ ಸಮಯದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನತೆ ಮುಗಿದು ಬಿದ್ದು ಸಾಮಾನು ಖರೀದಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆಗಮಿಸಿ ಜನತೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಿ, ಇದು ನಿಮಗೇ ಸಾಧ್ಯವಾಗದಿದ್ದರೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಎರಡು ದಿನ ವಾರಂತ್ಯದ ಕರ್ಪ್ಯೂ ಅತ್ಯಂತ ಟಫ್ ರೂಲ್ಸ್ ಇದ್ದ ಕಾರಣ ಯಾವುದೇ ವ್ಯಾಪಾರ ವಹಿವಾಟು ನಡೆದಿರಲಿಲ್ಲ. ಈ ಕಾರಣದಿಂದಾಗಿ ಬೆಳಿಗ್ಗೆ 06 ಗಂಟೆಯಿಂದಲೇ ವ್ಯಾಪಾರ ಅತ್ಯಂತ ಬಿರುಸಾಗಿ ಸಾಗಿತ್ತು. 9 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಸಮಯವಕಾಶ ಸಾಲದೆ ಸಾರ್ವಜನಿಕರು ಪರದಾಡುತ್ತಿದ್ದರು. ಕೆಲವೊಂದು ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ಸಾಮಾನು ಖರೀದಿಗೆ ನಿಂತಿದ್ದ ಗ್ರಾಹಕರನ್ನು ಸಮಯದ ಅಭಾವದಿಂದಾಗಿ ಹಿಂದೆ ಕಳುಹಿಸಲಾಗಿದೆ.

Also Read  17 ಕೋಟಿ ರೂ. ವೆಚ್ಚದಲ್ಲಿ ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ➤ ಸಚಿವ ಅಂಗಾರರಿಂದ ಗುದ್ದಲಿಪೂಜೆ


ಇದೇ ವೇಳೆ ಅನಗತ್ಯವಾಗಿ ಪೇಟೆಗೆ ಬಂದ ವಾಹನ ಸವಾರರಿಗೆ ಕಡಬ ಪೊಲೀಸರು ದಂಡ ವಿಧಿಸಿ ಕಾನೂನು ಕ್ರಮ ಕೈಗೊಂಡರು. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದ ಪೊಲೀಸರು ದಾಖಲೆ ಪತ್ರಗಳನ್ನು ಪರಿಶೀಲಿಸಿ ಸಮರ್ಪಕ ಕಾರಣ ನೀಡಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. 9 ಗಂಟೆಯವರೆಗೆ ವ್ಯಾಪಾರ ವಹವಾಟಿಗೆ ಅವಕಾಶ ನೀಡಲಾಗಿದ್ದರೂ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ, ಮರ್ಧಾಳ, ಕಲ್ಲುಗುಡ್ಡೆ ಪೇಟೆಯಲ್ಲಿ ವರ್ತಕರು ಅವಧಿಗೆ ಮುನ್ನವೇ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದರು.

Also Read  ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಇಂದು 15 ಮಂದಿಯಲ್ಲಿ ಕೊರೋನಾ ದೃಢ

 

 

 

error: Content is protected !!
Scroll to Top