ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯುಪಿ ಜೈಲಿನಲ್ಲಿರುವ ರೌಫ್ ಶರೀಫ್ ರಿಗೆ ಸೂಕ್ತ ಚಿಕಿತ್ಸೆ ಹಾಗೂ ಶೀಘ್ರ ಬಿಡುಗಡೆಗೆ ಒತ್ತಾಯ ➤ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾ ವತಿಯಿಂದ ಪ್ಲೇಕಾರ್ಡ್ ಪ್ರದರ್ಶನ – News Kadaba

ಯುಪಿ ಜೈಲಿನಲ್ಲಿರುವ ರೌಫ್ ಶರೀಫ್ ರಿಗೆ ಸೂಕ್ತ ಚಿಕಿತ್ಸೆ ಹಾಗೂ ಶೀಘ್ರ ಬಿಡುಗಡೆಗೆ ಒತ್ತಾಯ ➤ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾ ವತಿಯಿಂದ ಪ್ಲೇಕಾರ್ಡ್ ಪ್ರದರ್ಶನ

(ನ್ಯೂಸ್ ಕಡಬ) Newskadaba.com ಬಳ್ಳಾರಿ, ಎ. 30. ಅನ್ಯಾಯವಾಗಿ ಯುಪಿ ಯ ಮಥುರಾ ಜೈಲಿನಲ್ಲಿರುವಂತಹ ಅಮಾಯಕ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ರವರ ಬಂಧನವನ್ನು ಖಂಡಿಸಿ ಮತ್ತು ಇದೀಗ ಮಥುರಾ ಜೈಲಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಯಾವುದೇ ಚಿಕಿತ್ಸೆಯನ್ನು ನೀಡದೆ ಇರುವಂತಹ ಯು ಪಿ ಪೊಲೀಸರ ಮತ್ತು ಸರಕಾರದ ನಡೆಯನ್ನು ಖಂಡಿಸಿ ದೇಶದಾದ್ಯಂತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಭಿಯಾನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಹೊಸಪೇಟೆ ಮತ್ತು ಸಿರುಗುಪ್ಪ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಕೋವಿಡ್-19ರ ಲಾಕ್ ಡೌನ್ ಸೂಚನೆ ಪಾಲಿಸುತ್ತಾ ತಮ್ಮ ತಮ್ಮ ಮನೆಯಲ್ಲೇ ಪ್ಲೆ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಶಾಷೂ, ಜಿಲ್ಲಾ ಜಂಟಿ ಕಾರ್ಯದರ್ಶಿ ಹಬೀಬ್ ಹಾಗೂ ಹೊಸಪೇಟೆ ಮತ್ತು ಸಿರುಗುಪ್ಪ ಏರಿಯಾ ಸಮಿತಿ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Scroll to Top