ಕಡಬದ ಪತ್ರಕರ್ತ ನಾಗರಾಜ್ N.K. ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.17. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರ ಹೆಸರಿನಲ್ಲಿ‌ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸ್ಥಳೀಯ ವ್ಯಕ್ತಿಗೆ ಸಂದೇಶ ರವಾನಿಸಿ ಹಣದ ಅವಶ್ಯಕತೆ ತೋಡಿಕೊಂಡ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ.


ಉದಯವಾಣಿ ಪತ್ರಿಕೆಯ ಕಡಬದ ಪ್ರತಿನಿಧಿ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಅವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ಸ್ಥಳೀಯ ವ್ಯಕ್ತಿಯೋರ್ವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ನಂತರ ಮೆಸೆಂಜರ್ ಮೂಲಕ 12 ಸಾವಿರ ತುರ್ತು ಹಣದ ಅಗತ್ಯವಿದ್ದು, ತಕ್ಷಣವೇ ಕಳುಹಿಸಿಕೊಡುವಂತೆ ಸಂದೇಶ ಬಂದಿತ್ತು. ಅನುಮಾನಗೊಂಡ ಕಡಬದ ವ್ಯಕ್ತಿಯು ನೇರವಾಗಿ ನಾಗರಾಜ್ ಎನ್.ಕೆ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸತ್ಯಾಂಶ ಬಯಲಾಗಿದೆ. ಬೇರೆಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಜನರನ್ನು ಯಾಮಾರಿಸುವ ವಂಚಕರ ಜಾಲ ಸಕ್ರಿಯವಾಗಿದೆ. ಎಲ್ಲರೂ ಜಾಗರೂಕತೆಯಿಂದ ಇದ್ದು, ಇಂತಹ ಮೋಸಕ್ಕೆ ಬಲಿ ಬೀಳದಂತೆ ನಾಗರಾಜ್ ಎನ್.ಕೆ‌. ಮನವಿ ಮಾಡಿದ್ದಾರೆ.

Also Read  ನೆಲ್ಯಾಡಿ: ಉ.ಪ್ರ. ಮೂಲದ ಕೂಲಿ ಕಾರ್ಮಿಕನಿಗೆ ಹಲ್ಲೆ- ಆರೋಪ

 

 

error: Content is protected !!
Scroll to Top