ಉಡುಪಿ: ಸ್ವಚ್ಚತಾ ಕಾರ್ಮಿಕರೋರ್ವರಿಗೆ ಯುವತಿಯರಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಉಡುಪಿ, ಎ. 23. ಇಲ್ಲಿನ ನಗರಸಭೆ ವ್ಯಾಪ್ತಿಯ ಸ್ವಚ್ಛತಾ ಕಾರ್ಮಿಕರೋರ್ವರ ಮೇಲೆ ಇಬ್ಬರು ಯುವತಿಯರು ಸೇರಿ ಮೂವರು ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಸ್ವಸಹಾಯ ಗುಂಪಿನ ಸ್ವಚ್ಛತಾ ಕಾರ್ಮಿಕ ಸುರೇಶ್‌ (32) ಎಂದು ಗುರುತಿಸಲಾಗಿದೆ. ಇವರು ಸಹಾಯಕ ಮಂಜು ಎಂಬವರೊಂದಿಗೆ ಜನಾರ್ದನ ಹೈಟ್ಸ್‌ ಕಟ್ಟಡದ ಸಮೀಪ ಕಸ ವಿಲೇವಾರಿ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಹಿಂದಿನಿಂದ ಬಂದ ಓರ್ವ ಯುವಕ ಹಾಗೂ ಇಬ್ಬರು ಯುವತಿಯರು ಸುರೇಶ್‌ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Also Read  'ಪಿಎಂ ಕುಸುಮ್ ಯೋಜನೆ' ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ               

error: Content is protected !!
Scroll to Top