ಕೋಟ: ಕಾರು ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸ್ಕೂಟರ್ ಸವಾರರಿಬ್ಬರಿಗೆ ಗಾಯ



(ನ್ಯೂಸ್ ಕಡಬ) newskadaba.com ಕೋಟ, ಎ. 23. ಸ್ಕೂಟರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಸಾಲಿಗ್ರಾಮ ಗುರುನರಸಿಂಹ ಮಂಟಪದ ಎದುರುಗಡೆ ಸಂಭವಿಸಿದೆ.







ಗಾಯಗೊಂಡವರನ್ನು ಚಿತ್ರಪಾಡಿಯ ಸತೀಶ್ ಆಚಾರಿ(42) ಹಾಗೂ ಸುಬ್ರಹ್ಮಣ್ಯ(13) ಎಂದು ಗುರುತಿಸಲಾಗಿದೆ. ಚಿತ್ರಪಾಡಿಯಿಂದ ಸಾಲಿಗ್ರಾಮ ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯ ಬಳಿಕ ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಲೆತ್ನಿಸಿದ್ದು, ಸಾಸ್ತಾನ ಟೋಲ್ ಹತ್ತಿರ ಟೋಲ್ ಸಿಬಂದಿ ಹಾಗೂ ಸಾರ್ವಜನಿಕರು ಸೇರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top