ಸುಬ್ರಹ್ಮಣ್ಯ: ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವಂತೆ ಕಾಂಗ್ರೆಸ್ ಸಮಿತಿ ಮನವಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ. 22. ಕುಕ್ಕೇ ಸುಬ್ರಹ್ಮಣ್ಯ ದೇಗುಲದ 120 ನೌಕರರ ಖಾಯಂನ್ನು ತಡೆಹಿಡಿದಿರುವುದನ್ನು ಸರಿಪಡಿಸುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಮತ್ತು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯು ದೇಗುಲದ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

ಅಲ್ಲದೇ ಮನವಿಯಲ್ಲಿ ಸುಬ್ರಹ್ಮಣ್ಯದ ಪ್ರಾಥಮಿಕ ಶಾಲೆಯನ್ನು ಶೀಘ್ರವಾಗಿ ಈಗಿರುವಲ್ಲೇ ಅಥವಾ ಪೊಲೀಸ್ ಮೈದಾನದಲ್ಲಿ ನಿರ್ಮಿಸುವಂತೆ ಕೋರಲಾಗಿದೆ. ಅನಘ ವಸತಿ ಗೃಹದಲ್ಲಿ ಸಿಬ್ಬಂದಿ ಕೊರತೆಯ ನೆಪಹೇಳಿ ಮೂರು ಅಂತಸ್ತನ್ನು ಮಾತ್ರ ಉಪಯೋಗಿಸುತ್ತಿದ್ದು, ಎಲ್ಲಾ ಅಂತಸ್ತನ್ನು ಉಪಯೋಗಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು, ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನೀರು ಶುದ್ದೀಕರಣ ಘಟಕ ಸೈರನ್ ಅಳವಡಿಸಬೇಕು, ಎರಡು ಭಾರಿ ಗ್ಯಾಸ್ ಸೋರಿಕೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ದೇವಸ್ಥಾನದ ನೌಕರರಿಗೆ 6 ನೇ ವೇತನ ಆಯೋಗದ ಮಂಜೂರಾತಿ ಮತ್ತು ಹೊರಗುತ್ತಿಗೆ ನೌಕರರನ್ನು ದೇವಳದ ನೌಕರರನ್ನಾಗಿ ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹರೀಶ್ ಇಂಜಾಡಿ, ಶಿವರಾಮ ರೈ, ಮೋಹನ್ ದಾಸ್ ರೈ, ಸುಬ್ರಹ್ಮಣ್ಯ ರಾವ್ ನೂಚಿಲ ಕೃಷ್ಣಮೂರ್ತಿ, ಬಾಲಕೃಷ್ಣ ಮರೀಲ್ ಹಾಗೂ ಪವನ್ ಎಂ ಡಿ ಮತ್ತಿತರರು ಉಪಸ್ಥಿತರಿದ್ದರು.

Also Read  ಬೆಳ್ಳಾರೆ: ಕಾಳುಮೆಣಸು ಕಳ್ಳತನ ➤ ನಾಲ್ವರು ಆರೋಪಿಗಳು ಅರೆಸ್ಟ್

error: Content is protected !!
Scroll to Top