ಸುಳ್ಯ: ಅಕ್ರಮ ಕಳ್ಳಬಟ್ಟಿ ತಯಾರಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ದಳ ➤ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಸುಳ್ಯ, ಎ. 22. ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ಅಬಕಾರಿ ದಳ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಕೇನ್ಯ ಗ್ರಾಮದ ಕೆಮ್ಮಟೆ ಎಂಬಲ್ಲಿ ನಡೆದಿದೆ.

ದಾಳಿಯ ವೇಳೆ 10 ಬಾಟಲಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಗೇರು ಹಣ್ಣಿನಿಂದ ತಯಾರಿಸಿದ 10 ಲೀ. ಸರಾಯಿ ಪತ್ತೆಯಾಗಿದ್ದು, ಈ ಸಂದರ್ಭ ಆರೋಪಿ ಕೆಮ್ಮಟೆ ಸುಂದರ ಗೌಡ ಎಂಬವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಬಕಾರಿ ದಳದ ನಿರೀಕ್ಷಕ ಸಿದ್ದಪ್ಪ ಮೇಟಿ, ಹಾಗೂ ಸಿಬ್ಬಂದಿಗಳಾದ ಮಲ್ಲಣ್ಣ ಗೌಡ, ರಘುನಾಥ ಬಜಂತ್ರಿ, ಅಶೋಕ್ ಹಾಗೂ ಶರಣಪ್ಪ ಕಾರ್ಯಚರಣೆ ನಡೆಸಿದ್ದರು.

Scroll to Top