ಮಂಗಳೂರು: ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಮುಂದಾದ ಯುವಕ ➤ ವಿದ್ಯುತ್ ಶಾಕ್ ತಗುಲಿ ಶೇಕಡಾ 50ರಷ್ಟು ಸುಟ್ಟು ಹೋದ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 15. ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ಕರೆಂಟ್ ಶಾಕ್ ಗೆ ಒಳಗಾಗಿ 50℅ ರಷ್ಟು ಸುಟ್ಟು ಹೋದ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಎಂಬಲ್ಲಿ ನಡೆದಿದೆ.


ವಿದ್ಯುತ್ ಶಾಕ್ ಗೆ ಒಳಗಾದವನನ್ನು ಜೋಕಟ್ಟೆ ನಿವಾಸಿ ಮೊಹಮ್ಮದ್ ದಿಶಾನ್(16) ಎಂದು ಗುರುತಿಸಲಾಗಿದೆ. ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಗೂಡ್ಸ್ ರೈಲು ಎಂಆರ್.ಪಿಎಲ್ ಒಳಗೆ ಹೋಗಲು ಕ್ಲಿಯರೆನ್ಸ್ ಸಿಗುವುದಕ್ಕಾಗಿ ಎರಡು ದಿನಗಳಿಂದ ಜೋಕಟ್ಟೆ ರೈಲ್ವೇ ನಿಲ್ದಾಣದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ಸ್ಥಳೀಯ ನಾಲ್ಕು ಬಾಲಕರು ಗೂಡ್ಸ್ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ಸಂದರ್ಭ ಬಾಲಕನಿಗೆ ರೈಲ್ವೇ ಇಲೆಕ್ಟ್ರಿಕ್ ಲೈನ್ ತಾಗಿದ ಪರಿಣಾಮ ನೆಲಕ್ಕೆ ಎಸೆಯಲ್ಪಟ್ಟು ಅರ್ಧ ಸುಟ್ಟು ಹೋಗಿದ್ದಾನೆ. ಇದನ್ನು ಕಂಡ ಇತರೇ ನಾಲ್ವರು ಅಲ್ಲಿಂದ ಕೆಳಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಹಾಗೂ ಬಜ್ಪೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಇಂದಿನಿಂದ ಸೆ.27 ರ ವರೆಗೆ ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳ ➤ ಪ್ರತೀ ಖರೀದಿಗೆ ಸ್ಕ್ರ್ಯಾಚ್ & ವಿನ್ ಯೋಜನೆಯಡಿ ಖಚಿತ ಉಡುಗೊರೆ ➤ ಗ್ರಾಹಕರಿಗಾಗಿ 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್

error: Content is protected !!
Scroll to Top