ಮಂಗಳೂರು: ಪಬ್ ಜಿ ವಿಚಾರದಲ್ಲಿ ಆಕಿಫ್ ಕೊಲೆ ಹಿನ್ನೆಲೆ ➤ ಆರೋಪಿ ದೀಪಕ್ ತಂದೆಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 06. ಪಬ್ ಜಿ ಆಟದ ದ್ವೇಷದಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಆರೋಪಿಯ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.


ಎ. 05ರಂದು ರಾತ್ರಿ ವೇಳೆ ಆಕಿಫ್ ಜೊತೆಗೆ ಜಗಳ ನಡೆದು ಬಳಿಕ ಕಲ್ಲು ಎತ್ತಿ ಹಾಕಿ ಮನೆಗೆ ಬಂದಿದ್ದ ದೀಪಕ್, ನಡೆದ ವಿಷಯವನ್ನೆಲ್ಲಾ ತಂದೆ ಸಂತೋಷ್ ಬಳಿ ತಿಳಿಸಿದ್ದನು. ಆದರೆ ಸಂತೋಷ್ ಮಗನ ಸಹಾಯಕ್ಕೆ ನಿಂತು ಆತನಲ್ಲಿ ತನಗೇನು ಗೊತ್ತಿಲ್ಲವೆಂಬಂತೆ ನಟಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಇದರಂತೆ ಪೊಲೀಸರಿಗೆ ಮಾಹಿತಿ ನೀಡದೆ ಆರೋಪಿಯನ್ನು ಅಡಗಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಪೊಲೀಸರು ಸಂತೋಷ್ ನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಸಂತೋಷ್ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲಿ ನೆಲೆಸಿದ್ದು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಪಬ್ ಜಿ ಆಟದಲ್ಲಿ ತನ್ನನ್ನು ಸೋಲಿಸುತ್ತಿದ್ದ ಎಂಬ ಸೇಡಿನಲ್ಲಿ ಆಕಿಫ್ ಎಂಬ 12 ವರ್ಷದ ಬಾಲಕನನ್ನು ದೀಪಕ್ ಹತ್ಯೆಗೈದಿದ್ದನು. ಆರೋಪಿಯನ್ನು ಭಾನುವಾರ ಬೆಳಗ್ಗೆ ಬಂಧಿಸಲಾಗಿದ್ದು, ಆತನಿಗೆ 17 ವರ್ಷ ಆಗಿರುವ ಕಾರಣ ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ.

Also Read  ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ

error: Content is protected !!
Scroll to Top