ಬೆಳ್ಳಾರೆ: ಮನೆಗೆ ನುಗ್ಗಿ ನಗದು, ಬೆಳ್ಳಿ ನಾಣ್ಯ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ. 05. ಮನೆಯೊಳಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು ಕೋಣೆಯೊಳಗೆ ಲಾಕ್ ಮಾಡಿ ಬೆಳ್ಳಿ ನಾಣ್ಯ ಹಾಗೂ ನಗದು ಕಳ್ಳತನಗೈದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಪರಣೆ ಎಂಬಲ್ಲಿ ರವಿವಾರ ಮುಂಜಾನೆ ನಡೆದಿದೆ.

ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ ಮಿತ್ರಾ ಜೈನ್ ಬಂಬಿಲಗುತ್ತು ಎಂಬವರ ಮನೆಯಿಂದ ಕಳ್ಳತನಗೈಯಲಾಗಿದೆ. ಮನೆಯ ಮಾಡಿನ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕೋಣೆಯೊಂದರಲ್ಲಿ ಮಲಗಿದ್ದ ಮಿತ್ರಾಜೈನ್ ಹಾಗೂ ಅವರ ಪುತ್ರಿ ದಿವ್ಯ ಎಂಬವರನ್ನು ಕೋಣೆಯೊಳಗೆ ಕೂಡಿ‌ಹಾಕಿ ನಗದು ಕದ್ದೊಯ್ದಿದ್ದಾರೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೇರ ನಗದು ವರ್ಗಾವಣೆ ಮೂಲಕ ರೈತರಿಗೆ 2100 ಕೋಟಿ ರೂ ಬೆಳೆ ವಿಮೆ ಪಾವತಿ: ರಾಜ್ಯ ಸರ್ಕಾರ

error: Content is protected !!
Scroll to Top