ಆಲಂಕಾರು: 108 ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ‌ನೀಡಿದ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಎ.03. ಇಲ್ಲಿನ ಆಲಂಕಾರಿನ 108 ಅಂಬ್ಯುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರದಂದು ನಡೆದಿದೆ.

ಸವಣೂರು ಅಟ್ಟೊಳೆ ನಿವಾಸಿ ವಿದ್ಯಾ(23) ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಲಂಕಾರಿನ ಅಂಬ್ಯುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸವಣೂರಿನಿಂದ ಪುತ್ತೂರು ನಡುವೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸೂತ್ರವಾಗಿ ಹೆರಿಗೆ ನಡೆಯುವಲ್ಲಿ ಇಎಂಟಿ ಚಂದ್ರಶೇಖರ ಎನ್. ಹಾಗೂ ಪೈಲಟ್ ಶಿವಶರಣಪ್ಪ ಸಹಕರಿಸಿದ್ದಾರೆ.

Also Read  ದೇಯಿಬೈದೆತಿಯ ಅವಹೇಳನ ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹ ► ವಿಹಿಂಪ, ಬಜರಂಗದಳದಿಂದ ಕಡಬದಲ್ಲಿ ಪ್ರತಿಭಟನೆ

 

 

error: Content is protected !!
Scroll to Top