ಶಿರ್ವ: ಪೋಷಕರೊಂದಿಗೆ ಬಟ್ಟೆಯಂಗಡಿಗೆ ಬಂದಿದ್ದ ಬಾಲಕಿ ಬಾವಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಶಿರ್ವ, ಎ. 04. ಪೋಷಕರೊಂದಿಗೆ ಬಟ್ಟೆ ಅಂಗಡಿಗೆ ಬಂದಿದ್ದ ಪುಟ್ಟ ಮಗುವೊಂದು ಆಟವಾಡುತ್ತಾ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮುದರಂಗಡಿಯ ಪೇಟೆಯಲ್ಲಿ ಶನಿವಾರದಂದು ನಡೆದಿದೆ.

ಮೃತ ಬಾಲಕಿಯನ್ನು ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿಗಳ ಎರಡೂವರೆ ವರ್ಷದ ಪ್ರಿಯಾಂಕ ಎಂದು ಗುರುತಿಸಲಾಗಿದೆ. ಈ ಬಾಲಕಿಯು ತನ್ನ ಪೋಷಕರೊಂದಿಗೆ ಇಲ್ಲಿನ ಮುಖ್ಯ ರಸ್ತೆಯಲ್ಲಿದ್ದ ಬಟ್ಟೆಯಂಗಡಿಗೆ ಬಂದಿದ್ದು, ಸಂಜೆ ಸುಮಾರು 4.30 ರ ವೇಳೆಗೆ ಅಂಗಡಿಯ ಹೊರಗೆ ಆಟವಾಡುತ್ತಾ ಅಲ್ಲಿ ಪಕ್ಕದಲ್ಲಿ ಅಪೂರ್ಣ ಆವರಣ ಗೋಡೆ ಇದ್ದ ಬಾವಿಗಯೊಂದಕ್ಕೆ ಬಿದ್ದಿತ್ತು. ತಾಯಿ ಬಟ್ಟೆ ಖರಿದೀಸಿ ಹೊರಗೆ ಬರುವಾಗ ಮಗು ಕಾಣದೇ ಗಾಬರಿಗೊಂಡು ಅಂಗಡಿ ಮಾಲಕರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದಾಗ ಅಲ್ಲೇ ಪಕ್ಕದ ಬಾವಿಯಲ್ಲಿ ಮಗುವಿನ ಬ್ಯಾಗ್ ಮತ್ತು ಹೂ ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಹಾಗೂ ಶಿರ್ವ ಪೊಲೀಸರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮಗು ಅದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು ಎನ್ನಲಾಗಿದೆ.

Also Read  ಉಳ್ಳಾಲ: ಕಳವುಗೈದ ಪಿಕಪ್ ವಾಹನ ಮತ್ತು ಆರೋಪಿ ಪೊಲೀಸರ ವಶಕ್ಕೆ

 

error: Content is protected !!
Scroll to Top