ಇಸ್ಲಾಂ ಧಾರ್ಮಿಕ ಭಾವನೆಗೆ ನಿಂದನೆ ಆರೋಪಿಯನ್ನು ಬಂಧಿಸುವಂತೆ ಆಗ್ರಹ ► ನಾಳೆ ಪ್ರತಿಭಟನೆ: ಕಡಬ ಬಂದ್ ಗೆ ಕರೆ, ವರ್ತಕರಲ್ಲಿ ಮನವಿ

(ನ್ಯೂಸ್) newskadaba.com ಕಡಬ, ಅ.23. ಮಕ್ಕಾದ ಕಅಬಾ ಶರೀಫ್ ಚಿತ್ರದ ಮೇಲೆ ಹಿಂದೂ ದೇವರ ಚಿತ್ರವನ್ನು ಹಾಕಿಕೊಂಡು ತನ್ನ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿಸಿಕೊಂಡ ಕಡಬದ ಯುವಕನ ವಿರುದ್ದ ಕಡಬ ಠಾಣೆಗೆ ದೂರು ನೀಡಿದ್ದರೂ ಆರೋಪಿಯ ಬಂಧನವಾಗದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡಬ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಕಡಬದಲ್ಲಿ ಅ.24 ರಂದು ಶಾಂತಿಯುತ ಮೆರವಣಿಗೆ ನಡೆಸಿ ಕಡಬ ತಹಶೀಲ್ದಾರರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಕಡಬ ಅಡ್ಡಗದ್ದೆ ಅಲ್ಮದೀನಾ ಮಸೀದಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು.


ಅವರು ಸೋಮವಾರ ಕಡಬದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿ, ಧಾರ್ಮಿಕ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ವತರ್ಿಸಿದ ಕಡಬ ಯುವಕ ಪ್ರದೀಪ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡಬ ಠಾಣೆಗೆ ಅ.21 ರಂದು ದೂರು ನೀಡಲಾಗಿದೆ. ಆದರೆ ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಹಾಗಾಗಿ ಮಂಗಳವಾರ ಕಡಬದ ಬಾಜಿನಡಿ ಗೈಬಾನ್ ಶಾ ವಲಿಯುಲ್ಲಾಹಿ ದರ್ಗಾ ಶರೀಫ್ನಿಂದ ಮೌನ ಮೆರವಣಿಗೆ ಆರಂಭಗೊಂಡು ಕಡಬ ಪೇಟೆಯ ಮುಖಾಂತರ ಸಾಗಿ ಕಡಬ ತಹಶೀಲ್ದಾರರ ಕಛೇರಿಯಲ್ಲಿ ಜಮಾಯಿಸಿ ಪ್ರತಿಭಟನಾ ಸಭೆ ನಡೆದು ಬಳಿಕ ತಹಶೀಲ್ದಾರರ ಮುಖಾಂತರ ರಾಜ್ಯ ಮುಖ್ಯಮಂತ್ರಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ದೂರು ನೀಡಲಾಗುವುದು. ಪ್ರತಿಭಟನೆಗೆ ಮುಸ್ಲಿಮೇತರರು, ಧಾರ್ಮಿಕ ಮುಖಂಡರು ಹಾಗೂ ಜನಪ್ರತಿನಿಧಿಗಳು ಬೆಂಬಲ ಸೂಚಿಸಲಿದ್ದಾರೆ ಎಂದರು.

Also Read  ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ ➤ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶ & ಪರಿಸರ ಸ್ನೇಹಿ ಪೀಡೆಗಳ ನಿರ್ವಹಣೆಯ ತರಬೇತಿ

ಕಡಬ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಮಾತನಾಡಿ, ಯಾವುದೇ ಧರ್ಮದ ವಿರುದ್ದ ನಾವು ಪ್ರತಿಭಟನೆ ಹಮ್ಮಿಕೊಂಡಿಲ್ಲ. ಧರ್ಮ ನಿಂದನೆ ಆರೋಪದಡಿಯಲ್ಲಿರುವ ಆರೋಪಿಯನ್ನು ಶೀಘ್ರ ಬಂಧಿಸಲು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.


ಬಂದ್ ಗೆ ಕರೆ, ವರ್ತಕರಲ್ಲಿ ಮನವಿ
ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಕಡಬ ಪೇಟೆಯ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ವರ್ತಕರಲ್ಲಿ ಸ್ವಯಂ ಪ್ರೇರಿತ ಬಂದ್ಗೆ ಮನವಿ ಮಾಡಲಾಗುವುದು ಎಂದರು.

Also Read  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರಿ ಮಳೆ ➤ ಹವಾಮಾನ ಇಲಾಖೆಯಿಂದ ಎಚ್ಚರಿಕೆ


ಪತ್ರೀಕಾಗೋಷ್ಟಿಯಲ್ಲಿ ಕಡಬ ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದಶರ್ಿ ಮಹಮ್ಮದ್ ಪೈಝಿ, ಕಲ್ಲುಗುಡ್ಡೆ ಹುದಾ ಮಸ್ಜಿದ್ ಅಧ್ಯಕ್ಷ ಖಾದರ್ ಸಾಹೇಬ್, ಕಡಬ-ಪನ್ಯ ಜುಮ್ಮಾ ಮಸ್ಜೀದ್ ಅಧ್ಯಕ್ಷ ಹುಸೈನ್ ಹಾಜಿ, ಕೋಡಿಂಬಾಳ ರಹ್ಮಾನಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಕೆ ಎಮ್ ಅಬುಬಕ್ಕರ್ ಹಾಜಿ, ಕಳಾರ ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಅಡ್ಕಾಡಿ, ಕಡಬ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್ ಕೆ ಎಂ, ಶರೀಫ್ ಎ ಎಸ್, ಆದಂ ಕುಂಡೋಳಿ, ಆಶ್ರಫ್ ಶೇಡಿಗುಂಡಿ, ಮದರ್ಾಳ ಗ್ರಾಮ ಪಂಚಾಯಿತಿ ಸದಸ್ಯ ಸುಲೈಮಾನ್ ಮೊದಲಾದವರು ಇದ್ದರು.

error: Content is protected !!
Scroll to Top