ಕಡಬ: ಮನೆಮಂದಿ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಏ. 01. ಮನೆಯವರೆಲ್ಲರೂ ಜಾತ್ರೆಗೆ ತೆರಳಿದ್ದ ಸಂದರ್ಭ ಕೊಯಿಲ ಗ್ರಾಮದ ಗಂಡಿಬಾಗಿಲು ಆನೆಗುಂಡಿ ಎಂಬಲ್ಲಿ ಚೆನ್ನಪ್ಪ ಗೌಡ ಎಂಬವರ ಮನೆಗೆ ಬುಧವಾರದಂದು ರಾತ್ರಿ ನುಗ್ಗಿದ ಕಳ್ಳರು ಸುಮಾರು ಏಳೂವರೆ ಪವನ್ ಚಿನ್ನಾಭರಣ ಲೂಟಿಗೈದ ಘಟನೆ ನಡೆದಿದೆ.

 

ಮನೆಯವರೆಲ್ಲ ಸಂಜೆ 7 ಗಂಟೆಗೆ ಕೊಯಿಲದಲ್ಲಿ ನಡೆಯುತ್ತಿದ್ದ ಜಾತ್ರೆಗೆಂದು ಹೋಗಿದ್ದು, ಮರಳಿ 10 ಗಂಟೆಗೆ ಬರುವುದರ ನಡುವೆ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  KMSpico Activator for Windows 11, 10, 8 & Office [ Updated 2024]

error: Content is protected !!
Scroll to Top