? ಹಾಸನ: ಬಸ್ ನಿಲ್ದಾಣದಲ್ಲಿ ಹೆತ್ತವರ ಜೊತೆ ಮಲಗಿದ್ದ ಅಪ್ರಾಪ್ತ ಬಾಲಕಿಯ ಹೊತ್ತೊಯ್ದು ಅತ್ಯಾಚಾರ ➤ ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಹಾಸನ, ಮಾ. 29. ಇಲ್ಲಿನ ಬಸ್ ನಿಲ್ದಾಣದಲ್ಲಿ ಪೋಷಕರೊಂದಿಗೆ ಮಲಗಿದ್ದ ಐದು ವರ್ಷದ ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಅಮಾನವೀಯ ಕೃತ್ಯ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

ರಾಮನಗರಕ್ಕೆ ತೆರಳಲೆಂದು ಬಂದ ಭಿಕ್ಷುಕ ದಂಪತಿಗಳು ರಾತ್ರಿಯಾಗಿದ್ದರಿಂದ ಬಸ್ ಸಿಗದೆ ಮಗುವನ್ನು ಮಲಗಿಸಿಕೊಂಡು ಬಾಸ್ ನಿಲ್ದಾಣದಲ್ಲೇ ಮಲಗಿದ್ದರು. ಈ ವೇಳೆ ಆಗಮಿಸಿದ ಕಿರಾತಕನೋರ್ವ ಮಗುವನ್ನು ಹೊತ್ತೊಯ್ದು ದುಷ್ಕೃತ್ಯವೆಸಗಿದ್ದಾನೆ. ನಿದ್ರೆಯಿಂದ ಎಚ್ಚೆತ್ತ ಪೋಷಕರು ಮಗುವಿಗಾಗಿ ಹುಡುಕಾಡಿದ ವೇಳೆ ಅಳುತ್ತಿದ್ದ ಮಗು ಪತ್ತೆಯಾಗಿದೆ. ಕಿರಾತಕ ಮಗುವನ್ನು ಹೆಗಲ ಮೇಲೆ ಹೊತ್ತೊಯ್ದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು, ಈ ಕುರೊತು ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಶಿಥಿಲಗೊಂಡ ಮನೆಯಲ್ಲಿ ಮತದಾನ ಮಾಡಿದ 104 ವರ್ಷದ ವೃದ್ಧೆ..!​ ➤ ಚರ್ಚೆಗೆ ಗ್ರಾಸವಾಯಿತು ಜಿಲ್ಲಾಧಿಕಾಯ ಫೇಸ್‌ಬುಕ್ ಪೋಸ್ಟ್.!​

 

 

error: Content is protected !!
Scroll to Top