? ಕ್ಲಾಸ್ ನಲ್ಲಿಯೇ ಶಿಕ್ಷಕನ ಮದ್ಯಪಾರ್ಟಿ..! ➤ ಶಿಕ್ಷಕ ಅಮಾನತು

(ನ್ಯೂಸ್ ಕಡಬ) newskadaba.com ಹೈದರಾಬಾದ್, ಮಾ. 27. ಶಾಲಾ ತರಗತಿಯಲ್ಲಿಯೇ ಕುಡಿದು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದ ಶಿಕ್ಷಕನೋರ್ವನನ್ನು ಸರ್ಕಾರ ಅಮಾನತು ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.


ಅಮಾನತಾದ ಶಿಕ್ಷಕನನ್ನು ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದ ಮಂಡಲ್ ಪರಿಷತ್ ಶಾಲೆಯ ಕೆ. ಕೋಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಈ ಶಿಕ್ಷಕ ಮದ್ಯದ ಬಾಟಲಿಗಳನ್ನು ತರಗತಿಗಳಿಗೆ ಹಾಗೂ ಶಿಕ್ಷಕರ ಕೊಠಡಿಗಳಲ್ಲಿಯೇ ಇಟ್ಟುಕೊಂಡು ಕುಡಿಯುತ್ತಿದ್ದು, ಈ ಕುರಿತು ಪ್ರಶ್ನಿಸಿದರೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಶಿಕ್ಷಕ ಮದ್ಯ ಸೇವಿಸುತ್ತಿದ್ದ ವೇಳೆ ಪೋಷಕರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಲ್ಲದೇ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

Also Read  ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ..!   ➤ ಹವಾಮಾನ ಇಲಾಖೆ ಮುನ್ಸೂಚನೆ.!

 

 

error: Content is protected !!
Scroll to Top