ಬೆಳ್ತಂಗಡಿ: ಸರಕಾರಿ ಬಸ್ಸುಗಳ ಕೊರತೆ ನೀಗಿಸಲು ಸಂಚಾರಿ ನಿಯಂತ್ರಕರಿಗೆ (TC) ಸಿಎಫ್ಐ ವತಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. ತಾಲೂಕಿನಾದ್ಯಂತ ವಿವಿಧ ಪ್ರದೇಶಗಳಿಗೆ ಸಂಚರಿಸುವ ಬಸ್ಸುಗಳಲ್ಲಿ ಪ್ರಮುಖವಾಗಿ ವೇಣೂರು, ಮೂಡಬಿದ್ರೆ, ಕಾರ್ಕಳ ಭಾಗದಿಂದ ಬರುವಂತಹ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ನೇತಾಡುತ್ತಾ ತುಂಬಾ ಸಂಕಷ್ಟದಿಂದ ಹೋಗುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಮತ್ತು ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಲುಪಲು ತೊಂದರೆ ಉಂಟಾಗುತ್ತಿದೆ. ಖಾಸಗಿ ಬಸ್ಸುಗಳ ನಿರ್ವಾಹಕರು ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಹತ್ತಿಸಿ ಬೇಜವಾಬ್ದಾರಿ ತೋರಿರುವುದರಿಂದ ಅಪಾಯಕಾರಿ ಸಂಭವಗಳು ಉಂಟಾಗಿರುವುದು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಮನಗಂಡು ಬೆಳ್ತಂಗಡಿ – ವೇಣೂರು -ಮೂಡಬಿದ್ರೆ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ಸುಗಳನ್ನು ಚಾಲನೆಗೆ ತಂದು ವಿದ್ಯಾರ್ಥಿಗಳಿಗೆ ಸಹಕರಿಸಬೇಕಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಸಮಿತಿಯು ಬೆಳ್ತಂಗಡಿ ಸಂಚಾರಿ ನಿಯಂತ್ರಕರಿಗೆ ಮನವಿಯನ್ನು ಸಲ್ಲಿಸಲಾಯಿತು.

Also Read  ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ


ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಯಾಸೀನ್ ಬಂಗೇರಕಟ್ಟೆ, ಕಾರ್ಯದರ್ಶಿ ಶಹೀರ್ ಪಾಂಡವರಕಲ್ಲು ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಸದಾಫ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಯುನಿಟ್ ನಾಯಕರು ಉಪಸ್ಥಿತರಿದ್ದರು.

error: Content is protected !!
Scroll to Top