ಕಡಬ: ಆಲ್ಸ್ಟಿನ್ ಗ್ಲೋಬಲ್ ಎಲ್ಇಡಿ ವರ್ಲ್ಡ್ ಶುಭಾರಂಭ ➤ ಎಲ್ಇಡಿ ಲೈಟ್ಸ್ ಗಳ ತಯಾರಿ, ಮಾರಾಟ ಹಾಗೂ ರಿಪೇರಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಎಲ್ಇಡಿ ವಸ್ತುಗಳ ತಯಾರಿಕಾ ಸಂಸ್ಥೆ ‘ಆಲ್ಸ್ಟಿನ್ ಗ್ಲೋಬಲ್ ಎಲ್ಇಡಿ ವರ್ಲ್ಡ್’ ಕಡಬದ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಕಮರ್ಷಿಯಲ್‌ ಕಾಂಪ್ಲೆಕ್ಸ್ ನಲ್ಲಿ ಸೋಮವಾರದಂದು ಶುಭಾರಂಭಗೊಂಡಿತು.

ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ರಿಬ್ಬನ್ ತುಂಡರಿಸುವ‌ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಫಾ| ಅಲೆಕ್ಸ್ ಒಟ್ಟಪ್ಲಾಕಲ್, ಮೈಕೆಲ್ ಓ.ಎಂ. ಹಾಗೂ ತ್ರೇಸಿಯಮ್ಮ ದಂಪತಿ ದೀಪ‌ ಬೆಳಗಿಸಿ ಶುಭಹಾರೈಸಿದರು. ರೆ|ಫಾ| ದೇವಸ್ಯ ಪೈಕಾಟ್ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಸೈಂಟ್ ಜೋಕಿಮ್ಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ|ಫಾ| ರೊನಾಲ್ಡ್ ಲೋಬೋ ಭಾಗವಹಿಸಿದ್ದರು. ಸಂಸ್ಥೆಯ ಮಾಲಕರಾದ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

Also Read  ಉಪ್ಪಿನಂಗಡಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಬಸ್

ನೂತನ ಸಂಸ್ಥೆಯಲ್ಲಿ ಲೈಟ್ಸ್, ಟ್ಯೂಬ್, ಸ್ಟ್ರಿಪ್ ಲೈಟ್ ಮೊದಲಾದ ಎಲ್ಇಡಿ ವಸ್ತುಗಳ ತಯಾರಿ, ಮಾರಾಟ ಹಾಗೂ ರಿಪೇರಿ ಮಾಡಲಾಗುತ್ತಿದ್ದು, ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top