(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.22. ಪೆಟ್ರೋಲ್, ಡೀಸೆಲ್ ಬೆಲೆ ಮುಗಿಲೆತ್ತರಕ್ಕೆ ಏರಿರುವುದರ ನಡುವೆಯೇ ಇದೀಗ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗ್ಯಾಸ್ ಸಿಲಿಂಡರ್ ದರ ಕಳೆದೆರಡು ತಿಂಗಳ ಅವಧಿಯಲ್ಲೇ ಗರಿಷ್ಠ ಬೆಲೆಯಲ್ಲಿ ನೆಲೆ ನಿಂತಿದ್ದು, ಅಡುಗೆ ಎಣ್ಣೆ ದರ ಕೂಡ ಭಾರೀ ಏರಿಕೆಯಾಗಿದೆ. ಪಾಮ್ ಆಯಿಲ್, ಸನ್ ಫ್ಲವರ್, ಶೇಂಗಾ ಎಣ್ಣೆ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಶೇಂಗಾ ಎಣ್ಣೆ 160 ರೂಪಾಯಿಂದ 200 ರೂಪಾಯಿಗೆ ಹೆಚ್ಚಳವಾದರೆ, ಸನ್ ಫ್ಲವರ್ ಎಣ್ಣೆ ಲೀಟರ್ ಗೆ 90 ರಿಂದ 170 ರೂಪಾಯಿವರೆಗೆ ಏರಿಕೆಯಾಗಿದ್ದು, ತಾಳೆ ಎಣ್ಣೆ 92 ರೂ.ನಿಂದ 135 ರೂ.ಗೆ ಹೆಚ್ಚಳವಾಗಿದೆ. ದಿಢೀರ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದು, ಅಡುಗೆ ಎಣ್ಣೆ ಬೆಲೆಯೇರಿಕೆಯು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.