(ನ್ಯೂಸ್ ಕಡಬ) newskadaba.com ಮುಂಬೈ, ಮಾ. 07. ಕಳೆದ ಬಾರಿ ಕೊರೋನಾ ಕಾರಣದಿಂದಾಗಿ ಕ್ರಿಕೆಟ್ ಪ್ರಿಯರಿಗೆ ವಂಚಿತವಾಗಿದ್ದ ಐಪಿಎಲ್ ಪಂದ್ಯಾವಳಿಯು ಈ ಬಾರಿ ಎಪ್ರಿಲ್ 9ರಿಂದ ಎಂದಿನ ಶೈಲಿಯಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಭಾರತದ ವಿವಿಧ ನಗರಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ವೇಳಾಪಟ್ಟಿಯನ್ನು ಬಿಸಿಸಿಐ ಈಗಾಗಲೆ ಬಿಡುಗಡೆ ಮಾಡಿದೆ.
ಎರಡು ವರ್ಷಗಳ ನಂತರ ಐಪಿಎಲ್ ಪಂದ್ಯಾಟ ಈ ಬಾರಿ ದೆಹಲಿ, ಚೆನ್ನೈ, ಬೆಂಗಳೂರು, ಕಲ್ಕತ್ತಾ, ಮುಂಬೈ ಹಾಗೂ ಅಹ್ಮದಾಬಾದ್ ನಗರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಉದ್ಘಾಟನಾ ಪಂದ್ಯವು ಚೆನ್ನೈ ನಲ್ಲಿ ಎಪ್ರಿಲ್ 9ರಂದು ಚೆನ್ನೈ ಕಿಂಗ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವೆ ನಡೆಯಲಿದ್ದು, ಫೈನಲ್ ಪಂದ್ಯಾಟವು ಮೇ 30ರಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಮುಂಬೈ ತಲಾ ಹತ್ತು ಪಂದ್ಯಗಳನ್ನು ಆಯೋಜನೆ ಮಾಡಲಿದ್ದು, ಅಹಮದಾಬಾದ್- ದೆಹಲಿ ತಲಾ 8 ಪಂದ್ಯಗಳನ್ನು ಆಯೋಜಿಸಲಿದೆ.