ಕೆಂಜಾರು: ಗೋಶಾಲೆ ನೆಲಸಮ ➤ ನೂರಾರು ಗೋವುಗಳು ಬೀದಿಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 05. ಸರಕಾರಿ ಜಾಗ ಅತಿಕ್ರಮಣ ಆರೋಪದಡಿ ಗೋ ಶಾಲೆಯೊಂದನ್ನು ನೆಲಸಮಗೊಳಿಸಿದ ಘಟನೆ ಕೆಂಜಾರುವಿನಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಕೆಂಜಾರು ಎಂಬಲ್ಲಿ ಕಪಿಲಾ ಗೋಶಾಲೆಯನ್ನು ಕೇಂದ್ರ ಸರ್ಕಾರದ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿಗಾಗಿ ಗೋವುಗಳು ಮೇಯಲು ಹೋಗಿದ್ದ ವೇಳೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ನೆಲಸಮ ಮಾಡಲಾಗಿದೆ ಎಂದು ತಿಳಿದು ಬಂದಿದೆ. 1993ರಲ್ಲಿ ಕೆಐಎಡಿಬಿ ಜಾಗದ ಮಾಲೀಕರಿಂದ ಹತ್ತು ವರ್ಷಗಳ ಹಿಂದೆ ಪರಿಹಾರ ಕೊಟ್ಟು ಈ ಜಾಗವನ್ನು ಸ್ವಾಧೀನ ಪಡಿಸಲಾಗಿತ್ತು. ಜಾಗ ಖರೀದಿಸಿ 2013ರಲ್ಲಿ ಪ್ರಕಾಶ್ ಶೆಟ್ಟಿ ಅವರು ಗೋ ಶಾಲೆಯನ್ನು ನಿರ್ಮಿಸಿದ್ದರು. ಗೋ ಶಾಲೆಗಾಗಿ ಪ್ರಕಾಶ್ ಶೆಟ್ಟಿಯವರು ಜಾಗ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗೋ ಶಾಲೆಯನ್ನು ಇದೀಗ ನೆಲಸಮ ಮಾಡಲಾಗಿದೆ. ಇದರಿಂದ ಗೋ ಶಾಲೆ ಇಲ್ಲದೇ ನೂರಾರು ಗೋವುಗಳು ಬೀದಿ ಪಾಲಾಗಿವೆ. ಗೋ ಶಾಲೆ ಜೊತೆಗೆ ಪ್ರಕಾಶ್ ಶೆಟ್ಟಿಯ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ನೆಲಸಮವಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

 

error: Content is protected !!

Join the Group

Join WhatsApp Group