ಕರ್ನಾಟಕ ಸಮಸ್ತ ಬಾಖವಿ ಉಲಮಾ ಒಕ್ಕೂಟ ನೂತನ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 04. ಕರ್ನಾಟಕ ಸಮಸ್ತ ಬಾಖವಿ ಉಲಮಾ ಒಕ್ಕೂಟ ಇದರ ಪ್ರಥಮ ಮಹಾಸಭೆ ಹಾಗೂ ನೂತನ ಸಮಿತಿ ರೂಪೀಕರಣ ಸಭೆಯು ಬುಧವಾರದಂದು ಪುತ್ತೂರು ಬದ್ರಿಯಾ ಜುಮಾ ಮಸೀದಿ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರು ಬದ್ರಿಯಾ ಜುಮಾ ಅಂಗಳದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಮಹಾನುಭಾವರ ಮಖಾಂ ಝಿಯಾರತ್ತಿಗೆ ಬಹು/ರಫೀಕ್ ಬಾಖವಿ ಮಠ ನೇತೃತ್ವ ನೀಡಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ದುಆಃ ಮತ್ತು ಅಧ್ಯಕ್ಷತೆಯನ್ನು ಉಸ್ತಾದ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಕೆ.ಐ.ಸಿ ಕುಂಬ್ರ ಮುದರ್ರಿಸ್ ಮುಹಮ್ಮದ್ ಆರಿಫ್ ಬಾಖವಿ ಸ್ವಾಗತಿಸಿದರು. ಹಮೀದ್ ಬಾಖವಿ ಉಸ್ತಾದ್ ಬೈರಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಹು. ಇಬ್ರಾಹೀಂ ಬಾಖವಿ ಕೆ‌.ಸಿ. ರೋಡ್ ಅಧ್ಯಕ್ಷೀಯ ಬಾಷಣ ನಡೆಸಿದರು. ಪೈವಳಿಕೆ ಮುದರ್ರಿಸ್ ರಫೀಕ್ ಬಾಖವಿ ಮಠ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಬಾಖಿಯಾತು ಸ್ವಾಲಿಹಾತಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಅಶೈಖ್ ಅಬ್ದುಲ್ ವಹ್ಹಾಬ್ ಖಾದಿರ್ರಿಲ್ ವೆಲ್ಲೂರು(ಬಾನಿ ಹಝ್ರತ್) ಇವರ ಹೆಸರಿನಲ್ಲಿ ಖತಮುಲ್ ಕುರ್-ಆನ್ ಸಮರ್ಪಿಸಿ ಪ್ರಾರ್ಥನೆ ಮಾಡಲಾಯಿತು. ನಂತರ ಇತರ ಬಾಖಿಯಾತಿನ ಸಂದರ್ಭೋಚಿತ ಚರ್ಚೆಗಳನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ನಂತರ ಅಶ್ರಫ್ ಬಾಖವಿ ಚಾಪಲ್ಲ ಸವಣೂರು, ರಫೀಕ್ ಬಾಖವಿ ಮೂಡಬಿದ್ರೆ, ಅಬ್ದುಲ್ ಖಾದರ್ ಬಾಖವಿ ಕಂಬಳಬೆಟ್ಟು, ಫಾರೂಕ್ ಬಾಖವಿ ಬಂಟ್ವಾಳ, ಉಸ್ಮಾನ್ ರಾಝಿ ಬಾಖವಿ ಅಕ್ಕರಂಙಾಡಿ, ಮುಹಮ್ಮದ್ ಆರಿಫ್ ಬಾಖವಿ ಶೃಂಗೇರಿ ಕೊಪ್ಪ, ಮುಹಮ್ಮದ್ ರಫೀಕ್ ಬಾಖವಿ ಕೊಡಗು, ಅಬ್ದುಸ್ಸಮದ್ ಬಾಖವಿ ಮೂಡಿಗೆರೆ, ನೌಶಾದ್ ಬಾಖವಿ ಕೊಡಗು ತಮ್ಮನ್ನು ಪರಿಚಯಿಸಿ ಮಾತನಾಡಿದರು. ನಂತರ ನೂತನ ಸಮಸ್ತ ಬಾಖವಿ ಉಲಮಾ ಒಕ್ಕೂಟವನ್ನು ರೂಪೀಕರಿಸಲಾಯಿತು.

Also Read  ಕೊರೋನಾ ಲಾಕ್ಡೌನ್ ಎಫೆಕ್ಟ್ ➤ ತಲೆ ಮೇಲೆ ಕೈ ಹೊತ್ತು ಕುಳಿತ ಮಧ್ಯಮ ವರ್ಗದ ಜನತೆ

ಇದರ ಗೌರವಾಧ್ಯಕ್ಷರು – ಅಲ್-ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಅಧ್ಯಕ್ಷರು- ಅಲ್-ಹಾಜ್ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಪ್ರ. ಕಾರ್ಯದರ್ಶಿ – ಮುಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಉಪಾಧ್ಯಕ್ಷರು – ಮುಹಮ್ಮದ್ ರಫೀಕ್ ಬಾಖವಿ ಮಠ, ಪೈವಳಿಕೆ, ಮುಹಮ್ಮದ್ ರಫೀಕ್ ಬಾಖವಿ ಕುಶಾಲನಗರ, ಅಬ್ದುಲ್ ಖಾದರ್ ಬಾಖವಿ ಕಂಬಳಬೆಟ್ಟು, ಕೋಶಾಧಿಕಾರಿ- ಮುಹಮ್ಮದ್ ರಫೀಕ್ ಬಾಖವಿ ಮೂಡಬಿದ್ರೆ ಜೊತೆ ಕಾರ್ಯದರ್ಶಿ- ಅಬ್ದುಸ್ಸಮದ್ ಬಾಖವಿ ಮೂಡಿಗೆರೆ, ಮುಹಮ್ಮದ್ ಫಾರೂಕ್ ಬಾಖವಿ ಬಂಟ್ವಾಳ, ನೌಶಾದ್ ಬಾಖವಿ ಕೊಡಗು, ಸಂ. ಕಾರ್ಯದರ್ಶಿ- ಅಶ್ರಫ್ ಬಾಖವಿ ಚಾಪಲ್ಲ ಸವಣೂರು, ಮೀಡಿಯಾ ವಿಂಗ್- ಉಸ್ಮಾನ್ ರಾಝೀ ಬಾಖವಿ ಅಕ್ಕರಂಙಡಿ, ಆರಿಫ್ ಬಾಖವಿ ಕೊಪ್ಪ, ಶೃಂಗೇರಿ ಇವರುಗಳನ್ನು ನೇಮಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅಬ್ದುಸ್ಸಮದ್ ಬಾಖವಿ ಧನ್ಯವಾದ ನಡೆಸಿ ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು.

Also Read  ಉಕ್ರೇನ್ ನಿಂದ ಸುರಕ್ಷಿತವಾಗಿ ಮಂಗಳೂರಿಗೆ ಮರಳಿದ ಅನುಷಾ ಭಟ್..!!

 

error: Content is protected !!
Scroll to Top