ಹೊಸ್ಮಠದ ಅಪಾಯಕಾರಿ ಹಂಪ್ ಗೆ ಕೊನೆಗೂ ಬಣ್ಣದ ಭಾಗ್ಯ ➤ ಮಾಧ್ಯಮ ವರದಿಗೆ ಎಚ್ಚೆತ್ತುಕೊಂಡ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ, ಮಾ.02. ಓರ್ವ ಯುವಕ ಹಾಗೂ ಓರ್ವ ಮಹಿಳೆಯನ್ನು ಬಲಿಪಡೆದ ಹೊಸ್ಮಠ ಸೇತುವೆಯ ಸಮೀಪ ಅಳವಡಿಸಲಾಗಿರುವ ಹಂಪ್ ಗೆ ಕೊನೆಗೂ ಬಣ್ಣ ಬಳಿಯಲಾಗಿದೆ.

ಹೊಸಮಠ ನೂತನ ಸೇತುವೆಯ ಬಳಿ ಉಪ್ಪಿನಂಗಡಿ-ಕಡಬ ರಾಜ್ಯರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್ (ರಸ್ತೆ ಉಬ್ಬು) ನಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಜೀವ ಹಾನಿಯೂ ಆಗುತ್ತಿರುವುದು ವಾಹನ ಚಾಲಕರ ಆತಂಕಕ್ಕೆ ಕಾರಣವಾಗಿತ್ತು. ಒಂದೂವರೆ ವರ್ಷದ ಹಿಂದೆ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ ಬಳಿಕ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ಕಾರಣಕ್ಕಾಗಿ ಹಂಪ್‌ಗಳನ್ನು ನಿರ್ಮಿಸಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಅಪಘಾತಗಳನ್ನು ತಡೆಯುವುದಕ್ಕಾಗಿ ರಚಿಸಲಾದ ಹಂಪ್‌ಗಳೇ ಅಪಘಾತಕ್ಕೆ ಕಾರಣವಾಗುತ್ತಿವೆ ಎನ್ನುವ ದೂರುಗಳು ವ್ಯಕ್ತವಾಗಿದ್ದು, ಹಂಪ್‌ನಿಂದಾಗಿ ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರ ಘನವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗದೆ ಅಪಘಾತಗಳಾಗುತ್ತಿವೆ.

Also Read  ಸೈಬರ್ ಕ್ರೈಂ- ಪಾರ್ಟ್‌ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು

ಈ ಬಗ್ಗೆ ಮಾಧ್ಯಮಗಳಲ್ಲಿ‌ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಂಬಂಧಪಟ್ಟ ಇಲಾಖೆಯು ಇದೀಗ ಹಂಪ್ ಗೆ ಬಣ್ಣ ಬಳಿದಿದೆ.

 

error: Content is protected !!
Scroll to Top