ಮಂಗಳೂರು: ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಕಸ್ಟಮ್ಸ್ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 02. ಚಿನ್ನವನ್ನು ವೈರ್ ರೂಪಕ್ಕೆ ಇಳಿಸಿ ಟ್ರಾಲಿ ಬ್ಯಾಂಗ್ ವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದೆ.

ಆರೋಪಿಯನ್ನು ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂದು ಗುರುತಿಸಲಾಗಿದೆ. ಇಂದು ದುಬೈನಿಂದ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ವೇಳೆ, ಆರೋಪಿಯ ಟ್ರಾಲಿ ಬ್ಯಾಗ್‍ ನಲ್ಲಿ ಚಿನ್ನವನ್ನು ಅಡಗಿಸಿಟ್ಟು, ಅಕ್ರಮ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಜೊತೆ ರೂ. 16,52,000 ಮೌಲ್ಯದ 350.00 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Scroll to Top