ಎಮ್ಮೆಮಾಡು ಉರೂಸ್ ಗೆ ಕೇರಳದಿಂದ ಜನರು ಆಗಮಿಸುತ್ತಿರುವ ಹಿನ್ನೆಲೆ ➤ ಸಂಪಾಜೆ ಗೇಟ್ ಬಳಿ ಬಿಗಿ ತಪಾಸಣೆ- ಸಾಲುಗಟ್ಟಿ ನಿಂತ ವಾಹನಗಳು

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 02. ಕೊರೋನಾ ಮುಂಜಾಗೃತಾ ಕ್ರಮವಾಗಿ ಹೊರ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣಾ ಕಾರ್ಯವು ಬಿಗಿಯಾದ ಕಾರಣ ಸಂಪಾಜೆ ಗೇಟ್‍ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.


ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡುವಂತೆ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದಲೇ ಸಂಪಾಜೆ ಗೇಟಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಕೊರೋನಾ ಪರೀಕ್ಷಾ ವರದಿ ತಂದ ಬಳಿಕ ಹೊರರಾಜ್ಯದ ವಾಹನಗಳಿಗೆ ಕೊಡಗಿಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಕೊಡಗಿನ ಎಮ್ಮೆಮಾಡು ಊರುಸ್ ಗೆ ಕೇರಳದಿಂದ ಅತೀಹೆಚ್ಚು ಜನರು ಬರುತ್ತಿದ್ದು, ಕೇರಳ ರಿಜೆಜಿಸ್ಟ್ರೇಶನಿನ ವಾಹನಗಳನ್ನು ಕೊಡಗು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಡೆದು ತಪಾಸಣೆ ನಡೆಸಲಾಗುತ್ತಿದೆ.

Also Read  ಕುಸಿತದ ಭೀತಿಯಲ್ಲಿ ಕೆಮ್ಮಾರ ಸೇತುವೆಯ ಪಾರ್ಶ್ವ ► ಸಂಭಾವ್ಯ ಅಪಾಯವನ್ನು ತಪ್ಪಿಸುವರೇ ಸಂಬಂಧಪಟ್ಟ ಅಧಿಕಾರಿಗಳು..!!

error: Content is protected !!
Scroll to Top