ಕೇರಳ- ಕರ್ನಾಟಕ ಪ್ರಯಾಣ ನಿಷೇಧವಿಲ್ಲ, ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ➤ ಸಚಿವ ಸುಧಾಕರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 24. ಕರ್ನಾಟಕ ಮತ್ತು ಕೇರಳ ನಡುವಿನ ಅಂತರಾಜ್ಯ ಪ್ರಯಾಣ ನಿಷೇಧ ಮಾಡಿಲ್ಲ. ಆದರೆ ಪ್ರಯಾಣಿಸುವ 72 ಗಂಟೆಗೆ ಮೊದಲು(ಹಳೆಯದಲ್ಲ) ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ವಯನಾಡ್ ಜಿ.ಪಂ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಗಡಿಯಲ್ಲಿ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಸರಕಾರದ ಆದೇಶದಿಂದಾಗಿ ದಕ್ಷಿಣ ಕನ್ನಡದ ತಲಪಾಡಿ ಮಾರ್ಗವಾಗಿ ಸಂಚಾರ ಬಂದ್ ಮಾಡಿದ ಹಿನ್ನೆಲೆ ಗಡಿನಾಡಿನಿಂದ ಮಂಗಳೂರಿಗೆ ವಿದ್ಯಾಬ್ಯಾಸಕ್ಕೆ, ಕರ್ತವ್ಯಕ್ಕೆ ಹಾಗೂ ಆಸ್ಪತ್ರೆಗಳಿಗೆ ಬರುವವರಿಗೆ ಸಮಸ್ಯೆ ಉಂಟಾಗಿದೆ. ಇದಕ್ಕೆ ಟ್ವೀಟ್ ಮಾಡಿದ ಡಾ.ಸುಧಾಕರ್, ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌ ಹಾಗೂ ಹೋಂ ಸ್ಟೇಗಳು ಸೇರಿದಂತೆ ಕೇರಳದಿಂದ ಹಿಂದಿರುಗುವವರಿಗೆ ಪ್ರವೇಶ ನೀಡುವ ಮುನ್ನ ಕೋವಿಡ್‌ ನೆಗೆಟಿವ್ ವರದಿ ಹೊಂದಿರಬೇಕೆಂದು ಹೇಳಿದ್ದಾರೆ.

Also Read  ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ

error: Content is protected !!
Scroll to Top