ಉನ್ನಾವೋ ಪ್ರಕರಣ ➤ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಲಖನೌ, ಫೆ. 21. ಉನ್ನಾವೋ ಬಾಲಕಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರಕರಣದ ಆರೋಪಿಗಳಾದ ವಿನಯ್ ಅಲಿಯಾಸ್ ಲಂಬು ಮತ್ತು ಆತನ ಸ್ನೇಹಿತನನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನದ ವಶಕ್ಕೆ ನೀಡಿದೆ ಎಂದು ಎಎಸ್.ಪಿ ವಿಕೆ ಪಾಂಡೇ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಗ್ರಾಮವೊಂದರಲ್ಲಿ ಮೇವು ತರಲು ಹೋದ ಮೂವರು ದಲಿತ ಬಾಲಕಿಯರಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಓರ್ವ ಬಾಲಕಿಯ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡುಬಂದಿದೆ. ಪ್ರೀತಿ ನಿರಾಕರಿಸಿದ್ದಾರೆ ಎಂಬ ವಿಚಾರದಲ್ಲಿ ಪ್ರಮುಖ ಆರೋಪಿ ನವೀನ್ ಬಾಲಕಿಯರಿಗೆ ವಿಷ ನೀಡಿದ್ದ ಎಂದು ತಿಳಿದು ಬಂದಿದೆ.

Also Read  ಆಗಸ್ಟ್ 15ರ ನಂತರ ಶಾಲಾ-ಕಾಲೇಜುಗಳ ಪುನರಾರಂಭ ➤ ಕೇಂದ್ರ ಸಚಿವ

error: Content is protected !!
Scroll to Top