(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 20. ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಪ್ರತೀ ಐದು ಗಂಟೆಗೊಂದು ಅತ್ಯಾಚಾರ, 19 ಗಂಟೆಗೊಂದು ಕೊಲೆ, 15 ನಿಮಿಷಕ್ಕೊಂದು ಕಾರು ಕಳ್ಳತನ, ಗಂಟೆಗೊಂದು ಸರಗಳ್ಳತನ ನಡೆಯುತ್ತಿದೆ ಎಂಬ ಆತಂಕಕಾರಿ ಅಂಕಿ ಅಂಸವನ್ನು ದಿಲ್ಲಿ ಪೊಲೀಸರು ಬಹಿರಂಗಗೊಳಿಸಿದ್ದಾರೆ.
2019ರಲ್ಲಿ ನಾಲ್ಕು ಗಂಟೆಗೊಂದು ಅತ್ಯಾಚಾರ, 17 ಗಂಟೆಗೊಂದು ಹತ್ಯೆ ಮತ್ತು 12 ನಿಮಿಷಕ್ಕೊಂದು ವಾಹನ ಕಳ್ಳತನ ನಡೆಯುತ್ತಿತ್ತು. ಆದರೆ ಸರಗಳ್ಳತನ ಪ್ರಕರಣಗಳು 2019ರಲ್ಲಿ ದಿನಕ್ಕೆ ಸರಾಸರಿ 17 ವರದಿಯಾದರೆ, ಇದೀಗ ಪ್ರತಿದಿನ ಸರಾಸರಿ 24 ಪ್ರಕರಣಗಳು ನಡೆಯುತ್ತಿವೆ. ಇಷ್ಟಾಗಿಯೂ ದೆಹಲಿಯಲ್ಲಿ 1,699 ಅತ್ಯಾಚಾರ, 2,186 ಲೈಂಗಿಕ ಕಿರುಕುಳ ಮತ್ತು 65 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ದಾಖಲಾಗಿವೆ. ಮಹಿಳೆಯರ ವಿರುದ್ಧ ಈ ರೀತಿಯ ಪ್ರಕರಣಗಳು ಕಡಿಮೆಯಾಗಿರುವುದು ಇದೇ ಮೊದಲು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. 2020ರ ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ನಾಲ್ಕು ತಿಂಗಳ ಕಾಲ ಜನ ಮನೆಗಳಲ್ಲೇ ಉಳಿದದ್ದು ಕೂಡಾ ಅಪರಾಧ ಪ್ರಕರಣಗಳು ಕಡಿಮೆಯಾಗಲು ಕಾರಣವಾಗಿದೆ.