ಮಂಗಳೂರು: ದಿಶಾರವಿ ಬಂಧನದ ವಿರುದ್ದ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ➤ ಫ್ಯಾಶಿಷ್ಟರ ವಿರುದ್ದ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ನಿರಂತರ- ಸರ್ಫರಾಝ್ ಗಂಗಾವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 19. ಟೂಲ್ ಕಿಟ್ ವಿಚಾರದಲ್ಲಿ ಹವಾಮಾನ ಹೋರಾಟಗಾರ್ತಿ ದಿಶಾ ರವಿಯನ್ನು ಅಕ್ರಮವಾಗಿ ಬಂಧಿಸಿದ ದೆಹಲಿ ಪೋಲೀಸರ ನಡೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ಕೇಂದ್ರದಲ್ಲಿರುವ ಹೇಡಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ಯುಎಪಿಎ ಯಂತಹ ಕರಾಳ ಕಾನೂನನ್ನು ಹಾಕಿ ಜೈಲುಗಟ್ಟುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ಯಾಂಪಸ್ ಫ್ರಂಟ್ ಗಲ್ಲಿ ಗಲ್ಲಿಗಳಲ್ಲಿ ಶಾಹಿನ್ ಬಾಗ್ ಮಾದರಿಯ ಹೋರಾಟವನ್ನು ನಡೆಸಲಿದೆ ಎಂದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಮುರ್ಷಿದ, ಮಂಗಳೂರು ನಗರ ಅಧ್ಯಕ್ಷ ಇನಾಯತ್, ಕಾರ್ಯದರ್ಶಿ ಮುನೀರ್, ಮಂಗಳೂರು ಗ್ರಾಮಾಂತರ ಅಧ್ಯಕ್ಷ ಶರ್ಫುಧ್ಧೀನ್ ಹಾಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು.

Also Read  ಅರಂತೋಡು: ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮ

error: Content is protected !!
Scroll to Top