? ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಭಿಕ್ಷುಕನ ಹತ್ಯೆ ➤ ಆರೋಪಿಗಳಿಗಾಗಿ ಶೋಧಕಾರ್ಯ

(ನ್ಯೂಸ್ ಕಡಬ) newskadaba.com ವಿಜಯಪುರ, ಫೆ‌. 13. ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಭಿಕ್ಷುಕನೋರ್ವನನ್ನು ಹತ್ಯೆ ಮಾಡಿದ ಘಟನೆ ನಗರದ ವಿಶ್ವೇಶ್ವರ ಕಾಲನಿಯ ಸಿಟಿಬಸ್ ನಿಲ್ದಾಣದಲ್ಲಿ ನಡೆದಿದೆ.

 

ಬಸ್ ನಿಲ್ದಾಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಿಕ್ಷುಕನ ಮೃತದೇಹ ಪತ್ತೆಯಾಗಿದ್ದು, ಇವರು ಕಳೆದ ಕೆಲದಿನಗಳಿಂದ ಇಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಪಿಎಸ್.ಐ ಶರಣಬಸಪ್ಪ ಅವರು ತನಿಖೆ ಮುಂದುವರಿಸಿದ್ದು, ಭಿಕ್ಷುಕನ ಮುಖದ ಗುರುತು ಕೂಡ ಪತ್ತೆಹಚ್ಚಲು ಕಷ್ಟಸಾಧ್ಯವಾದುದರಿಂದ ಪೊಲೀಸರು ಇನ್ನಷ್ಟು ಕೋನಗಳಿಂದ ತನಿಖೆ ನಡೆಸುವಂತಾಗಿದೆ. ಈ ಕೊಲೆಗೆ ಕಾರಣ ಏನೂ ಎಂಬ ಬಗ್ಗೆ ತನಿಖೆಯ ಮೇಲಷ್ಟೇ ತಿಳಿದುಬರಬೇಕಿದೆ.

Also Read  ಕುಂದಾಪುರ: ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಕಡವೆ ಮರಿ ಮೃತ್ಯು!!!                                       

error: Content is protected !!
Scroll to Top