ರಾಜ್ಯಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿಗೆ ಸಮ್ಯಕ್ತ್ ಜೈನ್ ಆಯ್ಕೆ ➤ ಫೆ. 14ರಂದು ಸುಳ್ಯದಲ್ಲಿ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಫೆ. 13. ಫೆ. 14‌ರಂದು ಸುಳ್ಯದಲ್ಲಿ ನಡೆಯಲಿರುವ ‘ಕವಿ ಸಂಗಮ – ಕವಿ ಸಂಭ್ರಮ’ ಕಾರ್ಯಕ್ರಮದಲ್ಲಿ ನೀಡಲಿರುವ 2021 ನೇ ಸಾಲಿನ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿಗೆ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರು ಆಯ್ಕೆಗೊಂಡಿದ್ದಾರೆ.

ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿರುವ ಇವರು ಈಗಾಗಲೇ ರಾಜ್ಯ, ಅಂತರ್ ರಾಜ್ಯಮಟ್ಟದ ಹಲವಾರು ಬಹುಮಾನಗಳಿಗೆ ಹಾಗು ಸನ್ಮಾನಗಳಿಗೆ ಭಾಜನರಾಗಿದ್ದು, ಪ್ರಸ್ತುತ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಮುಂದುವರಿಸುತ್ತಿದ್ದಾರೆ. ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ರವರ ಸುಪುತ್ರ.

Also Read  ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಶಿಕ್ಷಕರಿಂದ ಪ್ರತಿಭಟನೆ

error: Content is protected !!
Scroll to Top