ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿಯೂ ಕಾಡಾನೆ ಸಂಚಾರ ? ತೋಟಕ್ಕೆ ನುಗ್ಗಿ ಬಾಳೆ ಕೃಷಿ ನಾಶಪಡಿಸಿದ ಸಲಗ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಕಡಬಕ್ಕೆ ಕಾಡಾನೆ ಲಗ್ಗೆಯಿಟ್ಟ ಬೆನ್ನಲ್ಲೇ ಇದೀಗ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿಯೂ ಕಾಡಾನೆ ಕಂಡುಬಂದಿದ್ದು, ಅಪಾರ ಕೃಷಿ ನಾಶಗೈದಿದೆ.

ಮಂಗಳವಾರ ರಾತ್ರಿ ವೇಳೆಗೆ ಅನಿಲ ನಿವಾಸಿಗಳಾದ ಕೇಶವ್, ವೆಂಕಟೇಶ್ ಮೊದಲಾದವರ ತೋಟಕ್ಕೆ ಕಾಡಾನೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಬಾಳೆ ಕೃಷಿಯನ್ನು ಹಾನಿಗೈದಿದೆ. ಆನೆ ಬಂದ ವಿಷಯ ತಿಳಿದ ಸ್ಥಳೀಯರು ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದ್ದಾರೆ. ಇದೀಗ ಆನೆಯು ರಾಜ್ಯ ಹೆದ್ದಾರಿಯತ್ತ ಚಲಿಸಿದ್ದು, ಕೈಕಂಬದಿಂದ ಗುಂಡ್ಯ ಮಾರ್ಗವಾಗಿ ರಾತ್ರಿ ಸಂಚರಿಸುವವರು ಜಾಗರೂಕರಾಗುವುದು ಒಳಿತು.

Also Read  ಪ.ವರ್ಗ ಕಾನೂನು ಪದವೀಧರರಿಗೆ ತರಬೇತಿ

error: Content is protected !!
Scroll to Top