ಐತ್ತೂರು: ಸುಳ್ಯ-ನೇಲ್ಯಡ್ಕ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.18. ಐತ್ತೂರು ಗ್ರಾಮದ ಸುಳ್ಯ-ನೇಲ್ಯಡ್ಕ ಪರಿಶಿಷ್ಠ ಜಾತಿಯ ಕಾಲೋನಿ ರಸ್ತೆಗೆ ತಾ.ಪಂ. ಸದಸ್ಯರ 2017-18ರ ರೂ 1 ಲಕ್ಷ  ಅನುದಾನದಲ್ಲಿ ಕಾಂಕ್ರೀಟೀಕರಣಕ್ಕೆ ತಾ.ಪಂ.ಸದಸ್ಯೆ ಪಿ.ವೈ ಕುಸುಮರವರು ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮರ್ದಾಳ ಗ್ರಾ,ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಎ.ಪಿ.ಎಂ.ಸಿ. ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಗ್ರಾ.ಪಂ.ಸದಸ್ಯ ಹರೀಶ್ ಕೋಡಂದೂರು, ನೇಲ್ಯಡ್ಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಮಿನಿ ಈಶೋಫಿಲಿಪ್, ಗುತ್ತಿಗೆದಾರ ಅಭಿಲಾಷ್ ಬಿಳಿನೆಲೆ, ಪತ್ರಿಕಾ ವಿತರಕ ರಮೇಶ್ ರೈ ಅಳೇರಿ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೇಲ್ಯಡ್ಕ ಶಾಲಾ ಶಿಕ್ಷಕ ತೀರ್ಥೇಶ್ ಪಡೆಜ್ಜಾರು ಸ್ವಾಗತಿಸಿ, ವಂದಿಸಿದರು.

Scroll to Top