
(ನ್ಯೂಸ್ ಕಡಬ) newskadaba.com, ನ .14. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹27 ಹೆಚ್ಚಳವಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ ₹13,762ಕ್ಕೆ ತಲುಪಿದೆ.
ಇನ್ನು 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ₹270 ಏರಿಕೆಯಾಗಿದ್ದು, ಇಂದಿನ ದರ ₹1,37,620ಕ್ಕೆ ದಾಖಲಾಗಿದೆ.
ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿರುವುದು ಆಭರಣ ಖರೀದಿಗೆ ಯೋಜಿಸಿರುವ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.




