ವಿಟ್ಲ: ವಿದ್ಯುತ್ ಶಾಕ್‍ನಿಂದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಅ.17. ವಿದ್ಯುತ್ ಶಾಕ್ ಹೊಡೆದುರ ಪರಿಣಾಮ  ಮೆಡಿಕಲ್ ಶಾಪ್ ಮಾಲಕರೋರ್ವರು ಮೃತಪಟ್ಟ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಮೃತರನ್ನು ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕರೈ ನಿವಾಸಿ ದೇವಪ್ಪ ಬಂಗೇರ ಎಂಬವರ ಪುತ್ರ ರಾಜಶೇಖರ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟಿನಲ್ಲಿ ಧನ್ವಂತರಿ ಆಯುರ್ವೇದ ಔಷಧಾಲಯವನ್ನು ಹೊಂದಿದ್ದು, ಇಂದು  ತನ್ನ ನಿವಾಸದ ಸಮೀಪದಲ್ಲಿನ ತನ್ನದೇ ಕೋಳಿ ಫಾರಂ ಒಳಗೆ ಏನೋ ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದಿದೆ. ತಕ್ಷಣವೇ ಅವರನ್ನು ವಿಟ್ಲದ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Also Read  ಕಲ್ಲಾಜೆ: ಶಿವಶಕ್ತಿ ಯುವಕ ಮಂಡಲದ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ➤ ಮರ್ಧಾಳದ ಕೊಹಿನೂರ್ ಮೆಡಿಕಲ್ಸ್ ಸಹಯೋಗ

error: Content is protected !!
Scroll to Top