ಮರ್ದಾಳ: ಶ್ರೀ ವಿವೇಕಾನಂದ ಯುವಕ ಮಂಡಲ ಸಮಿತಿ ರಚನೆ ► ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಮರ್ದಾಳ ಶ್ರೀ ವಿವೇಕಾನಂದ ಯುವಕ ಮಂಡಲದ ವಾರ್ಷಿಕ ಸಭೆಯು ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.

ವಾರ್ಷಿಕ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಕಾರ್ಯದರ್ಶಿಯಾಗಿ ವಿನಯ ಕೇನ್ಯ ಅವರನ್ನು ಅಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಉಮೇಶ್ ಬ್ರಹ್ಮಶ್ರೀ, ಕ್ರೀಡಾ ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಮೀನಾಡಿ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಸಂತೋಷ್ ರೈ ಪಾಲೆತ್ತಡ್ಕ, ಜತೆ ಕಾರ್ಯದರ್ಶಿಯಾಗಿ ಉದಯ ಕುಮಾರ್ ರೈ ಮರ್ದಾಳ ಆಯ್ಕೆಯಾಗಿದ್ದಾರೆ.

Scroll to Top