ಕಡಬ: ಕಾರು ಮತ್ತು ಬೊಲೆರೋ ಅಪಘಾತದ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು ➤ ಮೃತರ ಸಂಖ್ಯೆ ಎರಡಕ್ಕೇರಿಕೆ



ಕಡಬ, ಜ.25. ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.





ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಭಾನುವಾರ ಸಂಜೆ ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ರಿಟ್ಝ್ ಕಾರು ಚಾಲಕ ನವೀನ್ ಮಾರ್ಟಿಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೃತರ ತಂದೆ ನಿಕೋಲಸ್ ಮಾರ್ಟಿಸ್, ತಾಯಿ ಸಿಸಿಲಿಯಾ ಲಸ್ರಾದೋ, ಸಹೋದರಿ ಸುಶ್ಮಾ ಮಾರ್ಟಿಸ್ ಹಾಗೂ ಪತ್ನಿ ಲವಿಟಾ ಲೋಬೋ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ನಿಕೋಲಸ್ ಮಾರ್ಟಿಸ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಈ ಮೂಲಕ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.






error: Content is protected !!
Scroll to Top